ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ 'ನ್ಯಾನೋ' ಮನೆ: ರಿಯಲ್ ಎಸ್ಟೇಟ್ ತಲ್ಲಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ 'ನ್ಯಾನೋ' ಮನೆ: ರಿಯಲ್ ಎಸ್ಟೇಟ್ ತಲ್ಲಣ
ಜನಸಾಮಾನ್ಯನ ಕಾರು ಕೊಳ್ಳುವ ಕನಸನ್ನು ಟಾಟಾ ತನ್ನ ನ್ಯಾನೋ ಮೂಲಕ ನನಸು ಮಾಡಿತು. ಇದೀಗ ಅದೇ ಜನಸಾಮಾನ್ಯನ ಮೇಲೆ ದೃಷ್ಟಿ ನೆಟ್ಟಿರುವ ಟಾಟಾ ಆತನ ಫ್ಲ್ಯಾಟ್ ಕೊಳ್ಳುವ ಕನಸನ್ನೂ ನನಸು ಮಾಡುವತ್ತ ಹೊರಟಿದ್ದರೆ, ಸಿಕ್ಕಾಪಟ್ಟೆ ದರ ಏರಿಕೆ ಮೂಲಕ ಜನ ಸಾಮಾನ್ಯನ ಕೈಗೆ ಮನೆ ಎಟುಕದಂತೆ ಮಾಡುತ್ತಿದ್ದ ಇತರೇ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಸಣ್ಣಗೆ ನಡುಕ ಮೂಡಿಸಿದೆ.

ಒಂದು ಲಕ್ಷ ರುಪಾಯಿಗೆ ಕಾರು ನೀಡಿದ ಟಾಟಾ ಈ ಬಾರಿ ಕೇವಲ ನಾಲ್ಕು ಲಕ್ಷ ರೂಪಾಯಿಗಳೊಳಗೆ ಮನೆಕಟ್ಟಿಕೊಡಲಿದೆ. ಟಾಟಾದ ಟಾಟಾ ಹೌಸಿಂಗ್ ರಿಯಲ್ ಎಸ್ಟೇಟ್ ಸಂಸ್ಥೆ ಶುಭಗೃಹ ಟೌನ್‌ಶಿಪ್ ಯೋಜನೆಯಡಿ ಈ ಸದವಕಾಶವನ್ನು ಜನಸಾಮಾನ್ಯನಿಗೆ ತೆರೆದಿಟ್ಟಿದೆ. ಈ ಫ್ಲ್ಯಾಟ್‌ನಲ್ಲಿ ಒಂದು ಕೋಣೆ ಹಾಗೂ ಇನ್ನೊಂದು ಅಡುಗೆ ಕೋಣೆ ಇರಲಿದೆ. ಬೆಲೆ 3.91 ಲಕ್ಷ ರೂಪಾಯಿಗಳು ಮಾತ್ರ. ಶುಭಗೃಹ ಟೌನ್‌ಶಿಪ್ ಯೋಜನೆಯಡಿ ಟಾಟಾ ಈ ಮನೆ ನಿರ್ಮಿಸಲಿದೆ.

ಎರಡು ಮಾದರಿಯ ಮನೆಗಳು ಲಭ್ಯವಿದ್ದು, ಮೊದಲ ಮಾದರಿಯ ಮನೆಗೆ 3.91 ಲಕ್ಷ ರೂಪಾಯಿಗಳಿರಲಿದ್ದು, ಎರಡನೇ ಮಾದರಿಯಲ್ಲಿ ಒಂದು ಹಾಲ್, ಅಡುಗೆ ಕೋಣೆ ಹಾಗೂ ಒಂದು ಬೆಡ್ ರೂಂ ಇರಲಿದೆ. ಈ ಮನೆಗೆ 6.7 ಲಕ್ಷ ರೂಪಾಯಿಗಳು. ಟಾಟಾದ ಈ ಅಪಾರ್ಟ್‌ಮೆಂಟ್ ಶ್ರೇಣಿಯಲ್ಲಿ ದೊಡ್ಡ ಮನೆಗಳೂ ಇರಲಿವೆ 10ರಿಂದ 15 ಲಕ್ಷ ರೂಪಾಯಿಗಳ ದೊಡ್ಡ ಮನೆಗಳೂ ಇರಲಿವೆ. ಆಯ್ಕೆ ಗ್ರಾಹಕರಿಗೆ ಬಿಟ್ಟಿದ್ದು.

ಟಾಟಾದ ಈ ಅಪಾರ್ಟ್‌ಮೆಂಟ್‌ಗಳಲ್ಲಿ ಆಟದ ಮೈದಾನ, ಸಮುದಾಯ ಭವನ, ಆಸ್ಪತ್ರೆ, ಶಾಲೆ ಹಾಗೂ ವಿಹಾರಕ್ಕೆ ಪ್ರತ್ಯೇಕ ಸ್ಥಳಾವಕಾಶವೂ ಇರಲಿದೆ. ಉತ್ತಮ ಹೂದೋಟದೊಂದಿಗೆ ಹಸಿರು ಪ್ರಕೃತಿಯೂ ಈ ಅಪಾರ್ಟ್‌ಮೆಂಟ್ ಮಂದಿಗೆ ದಕ್ಕುತ್ತದೆ ಎಂದು ಟಾಟಾ ಊರವಸೆ ನೀಡಿದೆ. ಮಳೆ ನೀರು ಸದ್ಬಳಕೆಗೆ ಜಲಮರುಪೂರಣ ವ್ಯವಸ್ಥೆಯೂ ಇಲ್ಲಿರಲಿದೆ.

ಅಂದ ಹಾಗೆ ಈ ಬಡ ಜನಸಾಮಾನ್ಯನ ಕನಸು ನನಸಾಗುವುದು ಸದ್ಯಕ್ಕೆ ಮುಂಬೈನಲ್ಲಿ ಮಾತ್ರ. ಮುಂಬೈನಿಂದ 100 ಕಿಮೀ ದೂರದಲ್ಲಿರುವ ಬೊಯ್ಸಾರ್ ಎಂಬಲ್ಲಿ ಟಾಟಾ ಈ ಕಡಿಮೆ ಬೆಲೆಯ ಫ್ಲ್ಯಾಟ್ ನಿರ್ಮಿಸಿಕೊಡಲಿದೆ. ಇವುಗಳು 283 ಚದರ ಅಡಿ, 360 ಚದರ ಅಡಿ ಹಾಗೂ 465 ಚದರ ಅಡಿ ವಿಸ್ತೀರ್ಣದ ವಿವಿಧ ಫ್ಲ್ಯಾಟ್ ಶ್ರೇಣಿಗಳು ಲಭ್ಯವಿವೆ. ಮೊದಲ ಹಂತದಲ್ಲಿ 1,000 ಮನೆಗಳನ್ನು ನಿರ್ಮಾಣ ಮಾಡಲಿದ್ದು, ಮೇ 11ರಿಂದ ಬುಕ್ಕಿಂಗ್‌ಗೆ ಲಭ್ಯವಾಗಲಿದೆ. ಬುಕ್ಕಿಂಗ್ ಸಂದರ್ಭ 10,000 ರೂ ಪಾವತಿಸಬೇಕು.

ಅರ್ಜಿ ಪ್ರತಿಗಳು 200 ರೂಪಾಯಿಗಳಿಗೆ ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಮೇ.11ರಿಂದ 25ರವರೆಗೆ ಲಭ್ಯವಿರಲಿದೆ. ಎರಡು ಹಾಗೂ ಮೂರನೇ ಹಂತದಲ್ಲಿ ನವದೆಹಲಿ, ಬೆಂಗಳೂರಿಗೂ ಈ ಶುಭಗೃಹ ಕಾಲಿಡಲಿದೆ. ಅಲ್ಲದೆ, ಕೋಲ್ಕತ್ತಾ, ಚೆನ್ನೈಗಳಲ್ಲೂ ಈ ಯೋಜನೆಯನ್ನು ವಿಸ್ತರಿಸಲು ಟಾಟಾ ಚಿಂತಿಸಿದೆ.

ಟಾಟಾ ಹೌಸಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬೋರ್ಟಿನ್ ಬ್ಯಾನರ್ಜಿ ಮಾತನಾಡಿ, ಈ ಯೋಜನೆಯನ್ನು 24 ತಿಂಗಳೊಳಗೆ ಟಾಟಾ ಪೂರೈಸಲಿದ್ದು, ಲಾಟರಿ ಮುಖಾಂತರ ಫ್ಲ್ಯಾಟ್‌ಗಳನ್ನು ಹಂಚಲಿದೆ. ಅದೃಷ್ಟವಂತರಿಗೆ ಫ್ಲ್ಯಾಟ್ ದೊರೆಯಲಿದ್ದು, ಉಳಿದವರಿಗೆ ಅವರ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ 24 ಪೈಸೆ ಏರಿಕೆ
ಇನ್ನೂ ಎರಡು ವರ್ಷ ಆರ್ಥಿಕ ಹಿಂಜರಿತ ಪರಿಣಾಮ
ಮಾವು ರಫ್ತಿನಲ್ಲಿ ಏರಿಕೆ
ರಿಲಯನ್ಸ್‌‌‌ನಿಂದ 1 ಪೈಸೆ. ದರದಲ್ಲಿ ಎಸ್‌ಎಂಎಸ್ ಸೌಲಭ್ಯ
580 ನೂತನ ಶಾಖೆಗಳು ಆರಂಭ: ಐಸಿಐಸಿಐ ಬ್ಯಾಂಕ್‌
ಬಿರ್ಲಾ ಸನ್‌ಲೈಫ್‌ಗೆ ಪ್ರಶಸ್ತಿಯ ಗರಿ