ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಒಪಿ ಬ್ಯಾಂಕ್‌ನಲ್ಲಿ 1300 ಉದ್ಯೋಗಿಗಳ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಒಪಿ ಬ್ಯಾಂಕ್‌ನಲ್ಲಿ 1300 ಉದ್ಯೋಗಿಗಳ ನೇಮಕ
ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಸಹೋದರ ಸಂಸ್ಥೆಯಾದ ಸ್ಟೇಟ್‌ ಬ್ಯಾಂಕ್ ಆಫ್ ಪಾಟಿಯಾಲಾ 50 ಶಾಖೆಗಳನ್ನು ವಿಸ್ತರಿಸುತ್ತಿದ್ದು, 1300 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

2009-10ರ ವರ್ಷಾಂತ್ಯಕ್ಕೆ 1,25,000 ಕೋಟಿ ರೂಪಾಯಿಗಳ ವಹಿವಾಟಿನ ಗುರಿಯನ್ನು ತಲುಪಲು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶಾಖೆಗಳ ವಿಸ್ತರಣೆ ಹಾಗೂ ಉದ್ಯೋಗಿಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ನಾಯರ್ ತಿಳಿಸಿದ್ದಾರೆ.

ನೂತನ ವಿಸ್ತರಿತ ಶಾಖೆಗಳಲ್ಲಿ ಕಾರ್ಯನಿರ್ವಹಿಸಲು 1,100 ಉದ್ಯೋಗಿಗಳನ್ನು ಕ್ಲರ್ಕ್ ಹುದ್ದೆಗಾಗಿ ಹಾಗೂ 200 ಪ್ರೋಬೇಷನರಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ನಾಯರ್ ಹೇಳಿದ್ದಾರೆ.

ಪ್ರಸ್ತುತ ಬ್ಯಾಂಕ್‌ನಲ್ಲಿ 11,365 ಉದ್ಯೋಗಿಗಳಿದ್ದು, ಕಳೆದ ವರ್ಷ 500 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಬ್ಯಾಂಕ್‌ನ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಆರ್‌ಎಸ್‌ ನಿವೃತ್ತಿಯನ್ನು ಪಡೆದಿರುವುದರಿಂದ ಉದ್ಯೋಗಿಗಳ ಕೊರತೆ ಎದುರಾಗಿದ್ದು, ಪ್ರತಿ ವರ್ಷ 300 ರಿಂದ 400 ಉದ್ಯೋಗಿಗಳು ನಿವೃತ್ತರಾಗುತ್ತಿರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿರುವುದರಿಂದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ನಾಯರ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ್ಯಾನೋ ಆಯ್ತು, ಜನಸಾಮಾನ್ಯನಿಗೆ ಟಾಟಾದಿಂದ ಈಗ ಮನೆ!
ಫಾರೆಕ್ಸ್: ರೂಪಾಯಿ ಮೌಲ್ಯ 24 ಪೈಸೆ ಏರಿಕೆ
ಇನ್ನೂ ಎರಡು ವರ್ಷ ಆರ್ಥಿಕ ಹಿಂಜರಿತ ಪರಿಣಾಮ
ಮಾವು ರಫ್ತಿನಲ್ಲಿ ಏರಿಕೆ
ರಿಲಯನ್ಸ್‌‌‌ನಿಂದ 1 ಪೈಸೆ. ದರದಲ್ಲಿ ಎಸ್‌ಎಂಎಸ್ ಸೌಲಭ್ಯ
580 ನೂತನ ಶಾಖೆಗಳು ಆರಂಭ: ಐಸಿಐಸಿಐ ಬ್ಯಾಂಕ್‌