ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉಕ್ಕು ಮಾರಾಟದಲ್ಲಿ ಗಣನೀಯ ಏರಿಕೆ:ಟಾಟಾಸ್ಟೀಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಕ್ಕು ಮಾರಾಟದಲ್ಲಿ ಗಣನೀಯ ಏರಿಕೆ:ಟಾಟಾಸ್ಟೀಲ್
ವಾಹನೋದ್ಯಮ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರಗಳಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಉಕ್ಕು ಮಾರಾಟದಲ್ಲಿ ಶೇ.31 ರಷ್ಟು ಹೆಚ್ಚಳವಾಗಿ 4.52 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ದೇಶದ ಪ್ರಮುಖ ಉಕ್ಕು ತಯಾರಿಕೆ ಸಂಸ್ಥೆ ಟಾಟಾ ಸ್ಟೀಲ್ ಪ್ರಕಟಿಸಿದೆ.

ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ 3.43 ಲಕ್ಷ ಟನ್ ಉಕ್ಕು ಮಾರಾಟ ಮಾಡಲಾಗಿತ್ತು ಎಂದು ಟಾಟಾ ಸ್ಟೀಲ್ ಮೂಲಗಳು ತಿಳಿಸಿದೆ. ಏಪ್ರಿಲ್ ತಿಂಗಳ ಅವಧಿಯಲ್ಲಿ ಉಕ್ಕು ಉತ್ಪಾದನೆಯನ್ನು ಪರಿಶೀಲಿಸಿದಾಗ ಶೇ.30 ರಷ್ಟು ಹೆಚ್ಚಳವಾಗಿ 5.16 ಲಕ್ಷ ಟನ್‌ಗಳಿಗೆ ತಲುಪಿದೆ.

ಕಳೆದ ವರ್ಷ 3.96 ಲಕ್ಷ ಟನ್ ಉಕ್ಕು ಉತ್ಪಾದಿಸಲಾಗಿತ್ತು. ಜಮ್‌ಶೆಡ್‌ಪುರ್‌‌ನಲ್ಲಿರುವ ಎರಡು ಘಟಕಗಳು ಹೆಚ್ಚುವರಿ ಉಕ್ಕು ಉತ್ಪಾದನೆಯನ್ನು ಮಾಡಿ ತಲಾ 2.02 ಹಾಗೂ 2.66 ಲಕ್ಷ ಟನ್ ಉಕ್ಕು ಉತ್ಪಾದಿಸಿದೆ ಎಂದು ಟಾಟಾ ಸ್ಟೀಲ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಚ್ಚಾ ತೈಲ ದರದಲ್ಲಿ ಏರಿಕೆ
ಜಾಗ್ವಾರ್ ಲಾಂಡ್‌ ರೋವರ್ ಒಪ್ಪಂದ ತಿರಸ್ಕ್ರತ
ಎಸ್‌ಬಿಒಪಿ ಬ್ಯಾಂಕ್‌ನಲ್ಲಿ 1300 ಉದ್ಯೋಗಿಗಳ ನೇಮಕ
ಟಾಟಾ 'ನ್ಯಾನೋ' ಮನೆ: ರಿಯಲ್ ಎಸ್ಟೇಟ್ ತಲ್ಲಣ
ಫಾರೆಕ್ಸ್: ರೂಪಾಯಿ ಮೌಲ್ಯ 24 ಪೈಸೆ ಏರಿಕೆ
ಇನ್ನೂ ಎರಡು ವರ್ಷ ಆರ್ಥಿಕ ಹಿಂಜರಿತ ಪರಿಣಾಮ