ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯುನಿಯನ್ ಬ್ಯಾಂಕ್‌ಗೆ 465ಕೋಟಿ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುನಿಯನ್ ಬ್ಯಾಂಕ್‌ಗೆ 465ಕೋಟಿ ಲಾಭ
ಸಾರ್ವಜನಿಕ ಕ್ಷೇತ್ರದ ಯುನಿಯನ್ ಬ್ಯಾಂಕ್‌ ಆಫ್ ಇಂಡಿಯಾ, ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ನಾಲ್ಕನೇ ತ್ರೈಮಾಸಿಕ ಅವಧಿಯ ನಿವ್ವಳ ಲಾಭದಲ್ಲಿ ಶೇ.10.75 ರಷ್ಟು ಕುಸಿತ ಕಂಡು 465.06 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 521.13 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿತ್ತು ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿದ್ದ ಬ್ಯಾಂಕ್‌ನ ಒಟ್ಟು ನಿವ್ವಳ ಆದಾಯ 2,913.10 ಕೋಟಿ ರೂಪಾಯಿಗಳಿಂದ 3,848.73 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಮಾರ್ಚ್ 31ಕ್ಕೆ ವರ್ಷಾಂತ್ಯಗೊಂಡಂತೆ ಬ್ಯಾಂಕ್ ನಿವ್ವಳ ವಾರ್ಷಿಕ ಲಾಭದಲ್ಲಿ ಶೇ.24.47 ರಷ್ಟು ಏರಿಕೆಯಾಗಿ 1,726.55 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದಲ್ಲಿ 1,387.03 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿತ್ತು ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.

ಬ್ಯಾಂಕ್‌ನ ಅಡಳಿತ ಮಂಡಳಿಯ ನಿರ್ದೇಶಕರು ಪ್ರತಿ 5 ರೂಪಾಯಿ ಮುಖಬೆಲೆಯ ಶೇರಿಗೆ ಡೆವಿಡೆಂಡ್ ಶೀಘ್ರದಲ್ಲಿ ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುನಿಯನ್ ಬ್ಯಾಂಕ್, ಲಾಭ, UBI Q4 net dips
ಮತ್ತಷ್ಟು
ಉಕ್ಕು ಮಾರಾಟದಲ್ಲಿ ಗಣನೀಯ ಏರಿಕೆ:ಟಾಟಾಸ್ಟೀಲ್
ಕಚ್ಚಾ ತೈಲ ದರದಲ್ಲಿ ಏರಿಕೆ
ಜಾಗ್ವಾರ್ ಲಾಂಡ್‌ ರೋವರ್ ಒಪ್ಪಂದ ತಿರಸ್ಕ್ರತ
ಎಸ್‌ಬಿಒಪಿ ಬ್ಯಾಂಕ್‌ನಲ್ಲಿ 1300 ಉದ್ಯೋಗಿಗಳ ನೇಮಕ
ಟಾಟಾ 'ನ್ಯಾನೋ' ಮನೆ: ರಿಯಲ್ ಎಸ್ಟೇಟ್ ತಲ್ಲಣ
ಫಾರೆಕ್ಸ್: ರೂಪಾಯಿ ಮೌಲ್ಯ 24 ಪೈಸೆ ಏರಿಕೆ