ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಿಟೇಲ್ ಕಂಪೆನಿಗಳೊಂದಿಗೆ ಒಪ್ಪಂದ: ಬಿಎಸ್‌ಎನ್‌ಎಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಟೇಲ್ ಕಂಪೆನಿಗಳೊಂದಿಗೆ ಒಪ್ಪಂದ: ಬಿಎಸ್‌ಎನ್‌ಎಲ್
ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ ಸಂಸ್ಛೆ ಉತ್ಪನ್ನಗಳು ಹಾಗೂ ಸೇವೆಗಳನ್ನು ಮಾರಾಟ ಮಾಡಲು ಇತರ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.

ನೇರ ಅಥವಾ ಪರೋಕ್ಷವಾಗಿ ಉತ್ಪನ್ನಗಳನ್ನು ಹಾಗೂ ಸೇವೆಗಳನ್ನು ಮಾರಾಟ ಮಾಡಲು ಆಸಕ್ತಿಯುಳ್ಳ ಕಂಪೆನಿಗಳಿಗೆ ಬಿಡ್ ಸಲ್ಲಿಸುವಂತೆ ಬಿಎಸ್‌ಎನ್‌ಎಲ್ ಮನವಿ ಮಾಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಡ್‌ನಲ್ಲಿ ಯಶಸ್ವಿಯಾದ ಕಂಪೆನಿಗಳು ಎರಡು ವರ್ಷಗಳ ಅವಧಿಯವರೆಗೆ ಆರಂಭಿಕ ಒಪ್ಪಂದ ಮಾಡಿಕೊಳ್ಳಲಾಗುವುದು ನಂತರ ಉತ್ತಮ ಪ್ರದರ್ಶನ ತೋರಿದಲ್ಲಿ ಒಪ್ಪಂದವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

ರಿಟೇಲ್ ಕಂಪೆನಿಗಳು ಬಿಎಸ್‌ಎನ್‌ಎಲ್ ಉತ್ಪನ್ನಗಳು ಹಾಗೂ ಸೇವೆಗಳನ್ನು ಮಾರಾಟ ಮಾಡುವುದರಿಂದ 150 ರೂಪಾಯಿಗಳಿಂದ 1500 ರೂಪಾಯಿಗಳವರೆಗೆ ಕಮಿಶನ್ ಮತ್ತು ಡಿಸ್ಕೌಂಟ್ ಪಡೆಯಲಿದ್ದಾರೆ. ರಿಟೇಲ್ ಕಂಪೆನಿಗಳು ಕನಿಷ್ಠ 50 ರಿಟೇಲ್ ಶಾಪ್‌ಗಳು ಹೊಂದಿದ್ದು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕನಿಷ್ಠ 50 ಕೋಟಿ ರೂಪಾಯಿ ವಹಿವಾಟು ನಡೆಸಿರತಕ್ಕದ್ದು ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯೋಜನೆಯ ಮಧ್ಯಂತರ ಅವಧಿಯ ಪರಿಶೀಲನೆ:ಮೊಂಟೆಕ್
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ 11 ಪೈಸೆ ಕುಸಿತ
ಭವಿಷ್ಯದಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚು ಪರಿಣಾಮಕಾರಿ: ಅಸೋಚಾಮ್
ವಿಪ್ರೋ 'ತರಂಗ್' ಉದ್ಘಾಟನೆ
ಟಾಟಾ ಕಮ್ಯೂನಿಕೇಶನ್ಸ್, ಆರ್‌ಟಿ ಕಾಂ ಒಪ್ಪಂದ
ಯುನಿಯನ್ ಬ್ಯಾಂಕ್‌ಗೆ 465ಕೋಟಿ ಲಾಭ