ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಶೇ.0.7ರಷ್ಟು ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.0.7ರಷ್ಟು ಏರಿಕೆ
PTI
ಅಗತ್ಯ ಅಹಾರ ಧಾನ್ಯ ವಸ್ತುಗಳ ದರ ಏರಿಕೆಯ ಮಧ್ಯೆ ಹಣದುಬ್ಬರ ದರ ಏಪ್ರಿಲ್ 25ಕ್ಕೆ ವಾರಂತ್ಯಗೊಂಡಂತೆ ಶೇ.0.57 ರಿಂದ ಶೇ.0.70ಕ್ಕೆಏರಿಕೆಯಾಗಿದೆ.

ಸಕ್ಕರೆ, ಹಾಲು, ತರಕಾರಿ, ದ್ವಿದಳ ಧಾನ್ಯಗಳು ಅಹಾರ ವಸ್ತುಗಳ ದರಗಳು ನಿರಂತರ ಏರಿಕೆ ಕಾಣುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.

ಸಗಟು ಸೂಚ್ಯಂಕ ದರ ಕಳೆದ ವರ್ಷದ ಏಪ್ರಿಲ್ ತಿಂಗಳಾಂತ್ಯಕ್ಕೆ ಶೇ.8.27ಕ್ಕೆ ತಲುಪಿತ್ತು. ಪ್ರಸಕ್ತ ತಿಂಗಳಲ್ಲಿ ಹಣದುಬ್ಬರ ದರ ನಿರಂತರ ಮೂರು ವಾರಗಳಲ್ಲಿ ಏರಿಕೆ ಕಂಡಿದೆ. ಕಳೆದ ಎಂಟು ವಾರಗಳಿಂದ ಹಣದುಬ್ಬರ ದರ ಶೇ.1ಕ್ಕಿಂತ ಇಳಿಕೆಯಲ್ಲಿ ಮುಂದುವರೆದಿದೆ.

ಪ್ರಸಕ್ತ ವಾರದಲ್ಲಿ ಟೀ ಶೇ.7 ರಷ್ಟು ಬಾಜ್ರಾ ಶೇ.3ರಷ್ಟು, ಹಾಲು, ಗೋಧಿ ಮತ್ತು ಮಸಾಲೆ ಪದಾರ್ಥಗಳು ಶೇ.1 ರಷ್ಟು ಏರಿಕೆ ಕಂಡಿವೆ.ಇಂಧನ,ವಿದ್ಯುತ್ ಮತ್ತು ಲ್ಯೂಬ್ರಿಕೆಂಟ್ಸ್‌ಗಳ ಸಗಟು ಸೂಚ್ಯಂಕ ದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ಏಪ್ರಿಲ್ 18 ರಿಂದ ಏಪ್ರಿಲ್ 25 ರವರೆಗಿನ ಅವಧಿಯಲ್ಲಿ ಸಗಟು ಸೂಚ್ಯಂಕ ದರ ಶೇ.0.2 ರಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಅಂಕಿ ಅಂಶಗಳ ಸಮೇತ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ದಿನಸಿ ವಸ್ತುಗಳ ದರಗಳು ಇಳಿಮುಖವಾದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಸೂಚ್ಯಂಕ ದರ ಕುಸಿತ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಿಟೇಲ್ ಕಂಪೆನಿಗಳೊಂದಿಗೆ ಒಪ್ಪಂದ: ಬಿಎಸ್‌ಎನ್‌ಎಲ್
ಯೋಜನೆಯ ಮಧ್ಯಂತರ ಅವಧಿಯ ಪರಿಶೀಲನೆ:ಮೊಂಟೆಕ್
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ 11 ಪೈಸೆ ಕುಸಿತ
ಭವಿಷ್ಯದಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚು ಪರಿಣಾಮಕಾರಿ: ಅಸೋಚಾಮ್
ವಿಪ್ರೋ 'ತರಂಗ್' ಉದ್ಘಾಟನೆ
ಟಾಟಾ ಕಮ್ಯೂನಿಕೇಶನ್ಸ್, ಆರ್‌ಟಿ ಕಾಂ ಒಪ್ಪಂದ