ಮುಂಬೈ : ದೇಶದ ಆರ್ಥಿಕ ಅಭಿವೃದ್ಧಿ ದರ ಪ್ರಸಕ್ತ ವರ್ಷದಲ್ಲಿ ಶೇ.7-7.5 ರಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ ಎಂದು ಯೋಜನಾ ಆಯೋಗದ ಸದಸ್ಯ ಕಿರಿಟ್ ಪರೀಖ್ ಹೇಳಿದ್ದಾರೆ.
ಆತ್ಯಂತ ಕೆಟ್ಟ ಆರ್ಥಿಕತೆಯ ಕಾಲ ಮುಕ್ತಾಯವಾಗಿದೆ ಎಂದು ಇಂಧನ ಸಮಾವೇಶದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇಂದ್ರ ರಿಸರ್ವ್ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.6ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿರುವುದಕ್ಕಿಂತ ಅಧಿಕವಾಗಿ ಶೇ.7-7.5ಕ್ಕೆ ತಲುಪಲಿದೆ ಎಂದು ಪಾರೀಖ್ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕತೆಯಲ್ಲಿ ಅಲ್ಪಮಟ್ಟಿನ ಚೇತರಿಕೆ ಕಂಡುಬಂದಿರುವುದರಿಂದ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7.5ಕ್ಕೆ ತಲುಪಲಿದೆ ಎಂದು ಪಾರೀಖ್ ಅಭಿಪ್ರಾಯಪಟ್ಟಿದ್ದಾರೆ. |