ಯುಎಸ್-ಇಂಡಿಯಾ ಬಿಜಿನೆಸ್ ಕೌನ್ಸಿಲ್ಗೆ ಗೂಗಲ್ ,ಟಾಟಾ ಸನ್ಸ್ ನಂತಹ ಪ್ರಖ್ಯಾತ ಕಂಪೆನಿಗಳಿಂದ 10 ಮಂದಿ ನಿರ್ದೇಶಕರನ್ನು ನೇಮಕ ಮಾಡಲಾಗಿದೆ ಎಂದು ಘೋಷಿಸಿದೆ.
ನೂತನ ಅಡಳಿತ ಮಂಡಳಿಯ ನಿರ್ದೇಶಕರಾಗಿ ನೆಲ್ಸನ್ ಡಬ್ಲೂ. ಕನ್ನಿಂಗ್ಹ್ಯಾಮ್, ಬಲ್.ಜಿ.ದಾಸ್ ವಾಲ್ಟರ್ ಎಫ್ ಡೊರನ್, ಬ್ರೂಕ್ಸ್ ಎನ್ಟ್ವಿಸ್ಟಲ್ ,ಡೇವಿಡ್ ಪಿ.ಗುಡ್, ವಿ.ಎಸ್ ಗೋಪಿನಾಥ್, ಲಾರೆನ್ಸ್ ಲೆಬೊವಿಟ್ಝ್, ರಾಜನಾಥನ್, ಶೈಲೇಶ್ ರಾವ್ ಮತ್ತು ಮನೋಜ್ ಸಿಂಗ್ ಅವರುಗಳನ್ನು ನೇಮಕ ಮಾಡಲಾಗಿದೆ.
ಯುಎಸ್-ಇಂಡಿಯಾ ಬಿಜಿನೆಸ್ ಕೌನ್ಸಿಲ್ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಭಾರತ ಮತ್ತು ಅಮೆರಿಕದ ವ್ಯಾಪಾರ ವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ರೊನ್ ಸೊಮರ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
|