ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೇ ಅಂತ್ಯಕ್ಕೆ ಬಡ್ಡಿ ದರ ಪರಿಶೀಲನೆ:ಎಸ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇ ಅಂತ್ಯಕ್ಕೆ ಬಡ್ಡಿ ದರ ಪರಿಶೀಲನೆ:ಎಸ್‌ಬಿಐ
ದೇಶದ ನಂಬರ್ ಒನ್ ಸ್ಥಾನದಲ್ಲಿರುವ ಸಾರ್ವಜನಿಕ ಕ್ಷೇತ್ರದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಮೇ ತಿಂಗಳಾಂತ್ಯದ ವೇಳೆಗೆ ಬಡ್ಡಿ ದರಗಳನ್ನು ಪರಿಷ್ಕರಿಸಲಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್‌ನ ಠೇವಣಿ ಸಂಗ್ರಹ ವೇಗದಲ್ಲಿ ಸಾಗುತ್ತಿದ್ದು, ಬೇಡಿಕೆಗಿಂತ ಪೂರೈಕೆಯಲ್ಲಿ ಏರಿಕೆಯಾಗಿದೆ ಎಂದು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥ ಒ.ಪಿ.ಭಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಠೇವಣಿಗಳ ಬಡ್ಡಿ ದರದಲ್ಲಿ ಮತ್ತಷ್ಟು ಕಡಿತವಾಗುವ ಅಗತ್ಯವಿದೆ. ಕಳೆದ 2008-09ರ ಆರ್ಥಿಕ ಸಾಲಿನ ಮಾರುಕಟ್ಟೆಯಲ್ಲಿ ಠೇವಣಿ ಶೇರುಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ಕಳೆದ ವರ್ಷ ಅತಿ ಹೆಚ್ಚು ಠೇವಣಿ ಸಂಗ್ರಹಿಸಿದ ದೇಶದ ಏಕೈಕ ಬ್ಯಾಂಕಾಗಿದ್ದು, ಪ್ರಸ್ತುತ ಪ್ರತಿದಿನ 200 ಮಿಲಿಯನ್ ಡಾಲರ್‌ ಠೇವಣಿ ಸಂಗ್ರಹವಾಗುತ್ತಿದೆ ಎಂದು ಹೇಳಿದ್ದಾರೆ.

ಬ್ಯಾಂಕ್‌ನ ಪ್ರೈಮ್‌ ಲೆಂಡಿಂಗ್ ದರಗಳಲ್ಲಿ ಮತ್ತಷ್ಟು ಕಡಿತ ಮಾಡುವ ಸಾಧ್ಯತೆಗಳಿವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಎಸ್‌ಬಿಐ ಬಡ್ಡಿ ದರಗಳು ಅತ್ಯಂತ ಕಡಿಮೆಯಾಗಿವೆ ಎಂದು ನುಡಿದರು.

ಸಾಮಾನ್ಯವಾಗಿ ಠೇವಣಿ ಮತ್ತು ಮುಂಗಡ ಬಡ್ಡಿ ದರಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಭಟ್‌ ಅಭಿಪ್ರಾಯ ವ್ಯಕ್ತಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಬಿಕ್ಕಟ್ಟು: ಟೊಯೊಟಾಗೆ 4.4 ಬಿಲಿಯನ್ ಡಾಲರ್ ನಷ್ಟ
ಆರ್ಥಿಕತೆ ಸುಧಾರಣೆ: ಆರ್‌ಬಿಐ
ಕಚ್ಚಾ ತೈಲ ದರದಲ್ಲಿ ಏರಿಕೆ
ಯುಎಸ್‌ಐಬಿಸಿಗೆ 10 ನಿರ್ದೇಶಕರ ನೇಮಕ
ಒಬಾಮಾ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ: ಪ್ರೇಮ್‌ಜಿ
ಜಿಡಿಪಿ ದರ ಶೇ.7 ರಷ್ಟು ಏರಿಕೆಯಾಗಲಿದೆ:ಯೋಜನಾ ಆಯೋಗ