ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಾಗತಿಕ 50 ಕಂಪೆನಿಗಳಲ್ಲಿ ಟಾಟಾ, ಎಸ್‌ಬಿಐ,ಇನ್ಫೋಸಿಸ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾಗತಿಕ 50 ಕಂಪೆನಿಗಳಲ್ಲಿ ಟಾಟಾ, ಎಸ್‌ಬಿಐ,ಇನ್ಫೋಸಿಸ್‌
ಜಗತ್ತಿನ ಪ್ರತಿಷ್ಠಿತ 200 ಕಂಪೆನಿಗಳ ಪಟ್ಟಿಯಲ್ಲಿ ಮೊದಲ 50 ಕಂಪೆನಿಗಳ ಸಾಲಿನಲ್ಲಿ ಟಾಟಾ ಗ್ರೂಪ್, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ,ಮತ್ತು ಇನ್ಫೋಸಿಸ್ ಟೆಕ್ನಾಲಾಜೀಸ್ ಸೇರಿದಂತೆ 17 ಭಾರತೀಯ ಕಂಪೆನಿಗಳು ಸ್ಥಾನಪಡೆದಿವೆ.

ಗೂಗಲ್, ಮೈಕ್ರೋಸಾಫ್ಟ್‌, ಜನರಲ್ ಎಲೆಕ್ಟ್ರಿಕ್, ಟೋಯೋಟಾ, ಕೋಕಾಕೋಲಾ ,ಇಂಟೆಲ್ ಮತ್ತು ಯುನಿ ಲೀವರ್‌ಕಂಪೆನಿಗಳ ಸಾಲಿನಲ್ಲಿ ಟಾಟಾ ಗ್ರೂಪ್ 11 ನೇ ಸ್ಥಾನವನ್ನು ಪಡೆದಿದೆ ಎಂದು ಅಮೆರಿಕ ಮೂಲದ ಬಿಜಿನೆಸ್ ಮ್ಯಾಗ್‌ಜಿನ್ ವರದಿ ಮಾಡಿದೆ.

ಇಟಲಿ ಮೂಲದ ಚಾಕೋಲೇಟ್ ತಯಾರಿಕೆ ಸಂಸ್ಥೆಯಾದ ಫೆರ್ರೆರೊ ಜಗತ್ತಿನಲ್ಲಿಯೇ ಪ್ರತಿಷ್ಠಿತ ಕಂಪೆನಿಯಾಗಿದ್ದು, ಕಳೆದ ವರ್ಷವಿದ್ದ ನಾಲ್ಕನೇ ಸ್ಥಾನದಿಂದ ಮೊದಲನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ಭಾರತದ ಪ್ರಮುಖ ಬ್ಯಾಂಕ್ ಎಸ್‌ಬಿಐ 29ನೇ ಸ್ಥಾನವನ್ನು ಪಡೆದಿದ್ದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ 39ನೇ ಸ್ಥಾನವನ್ನು ಪಡೆದಿದೆ.

ಇಂಜಿನಿಯರಿಂಗ್ ಕ್ಷೇತ್ರದ ದೈತ್ಯ ಸಂಸ್ಥೆ ಲಾರ್ಸನ್ ಆಂಡ್ ಟೌಬ್ರೋ 47 ನೇ ಸ್ಥಾನವನ್ನು ಪಡೆದಿದ್ದು, ಕಾರು ತಯಾರಿಕೆ ಸಂಸ್ಥೆ ಮಾರುತಿ ಸುಝುಕಿ 49ನೇ ಸ್ಥಾನವನ್ನು ತಲುಪಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೇ ಅಂತ್ಯಕ್ಕೆ ಬಡ್ಡಿ ದರ ಪರಿಶೀಲನೆ:ಎಸ್‌ಬಿಐ
ಆರ್ಥಿಕ ಬಿಕ್ಕಟ್ಟು: ಟೊಯೊಟಾಗೆ 4.4 ಬಿಲಿಯನ್ ಡಾಲರ್ ನಷ್ಟ
ಆರ್ಥಿಕತೆ ಸುಧಾರಣೆ: ಆರ್‌ಬಿಐ
ಕಚ್ಚಾ ತೈಲ ದರದಲ್ಲಿ ಏರಿಕೆ
ಯುಎಸ್‌ಐಬಿಸಿಗೆ 10 ನಿರ್ದೇಶಕರ ನೇಮಕ
ಒಬಾಮಾ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ: ಪ್ರೇಮ್‌ಜಿ