ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬಂದಿರುವುದರಿಂದ ಚಿನ್ನದ ವ್ಯಾಪಾರಿಗಳು, ಆಭರಣ ತಯಾರಕರು ಚಿನ್ನದ ಖರೀದಿಯಲ್ಲಿ ತೊಡಗಿದ್ದು ಚಿನ್ನದ ದರದಲ್ಲಿ 170 ರೂಪಾಯಿಗಳ ಏರಿಕೆಯಾಗಿ 10 ಗ್ರಾಂಗೆ 14,795 ರೂಪಾಯಿಗಳಿಗೆ ತಲುಪಿದೆ.
ಮಾರುಕಟ್ಟೆಯಲ್ಲಿ ಬೆಳ್ಳಿ ದರ ಕೂಡಾ 810 ರೂಪಾಯಿಗಳ ದಾಖಲೆಯ ಏರಿಕೆ ಕಂಡು ಪ್ರತಿ ಕೆಜಿಗೆ 22,950 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಶೇ.3.25 ರಷ್ಟು ಏರಿಕೆ ಕಂಡಿದ್ದು, ಬೆಳ್ಳಿ ದರ ಶೇ.0.4 ರಷ್ಟು ಏರಿಕೆ ಕಂಡ ಹಿನ್ನೆಲೆಯಲ್ಲಿ ಚಿನ್ನದ ದರ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆ ವಿತರಕರು ಅಭಿಪ್ರಾಯಪಟ್ಟಿದ್ದಾರೆ.
ಹೂಡಿಕೆದಾರರು ಶೇರುಪೇಟೆಗಳಲ್ಲಿನ ಹೂಡಿಕೆಯನ್ನು ಚಿನಿವಾರಪೇಟೆಯಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಚಿನ್ನದ ದರ ಏರಿಕೆಗೆ ಎಂದು ವಹಿವಾಟುದಾರರು ತಿಳಿಸಿದ್ದಾರೆ. |