ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮ್ಯಾಂಚೆಸ್ಟರ್‌ನೊಂದಿಗೆ ಏರ್‌ಟೆಲ್ ಒಪ್ಪಂದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮ್ಯಾಂಚೆಸ್ಟರ್‌ನೊಂದಿಗೆ ಏರ್‌ಟೆಲ್ ಒಪ್ಪಂದ
ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಏರ್‌ಟೆಲ್, ಮ್ಯಾಂಚೆಸ್ಟರ್ ಯುನೈಟೆಡ್‌ನೊಂದಿಗೆ ಬಹುಮಿಲಿಯನ್ ಡಾಲರ್‌ಗಳ ಒಪ್ಪಂದ ಮಾಡಿಕೊಂಡಿದ್ದು, ಏರ್‌ಟೆಲ್‌ನ ಗ್ರಾಹಕರು ಫುಟ್ಬಾಲ್ ಪಂದ್ಯಗಳ ಸಂಪೂರ್ಣ ಮಾಹಿತಿಯನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದ ಯುವಕರಲ್ಲಿ ಫುಟ್ಬಾಲ್ ಕ್ರೀಡೆಯ ಬಗ್ಗೆ ಆಸಕ್ತಿ ಹೆಚ್ಚುತ್ತಿದ್ದು ಗ್ರಾಹಕರಿಗೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳ ಸಂಪೂರ್ಣ ಮಾಹಿತಿ ಮೊಬೈಲ್‌ನಲ್ಲಿ ದೊರೆಯುವಂತಾಗಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರ್ಥಿ ಏರ್‌ಟೆಲ್‌ನ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಕಪೂರ್ ತಿಳಿಸಿದ್ದಾರೆ.

ಒಪ್ಪಂದದ ಮೊತ್ತದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಅವರು ಆದಾಯದಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್ ಮತ್ತು ಏರ್‌ಟೆಲ್‌ ಸಂಸ್ಥೆ ತಲಾ ಶೇ.50 ರಷ್ಟು ಆದಾಯ ಪಡೆಯಲಿವೆ ಎಂದರು.

ಒಪ್ಪಂದದ ಸಂದರ್ಭದಲ್ಲಿ ಖ್ಯಾತ ಫುಟ್ಬಾಲ್ ತಾರೆಗಳಾದ ವಾಯಿನ್ ರೊನೆ, ಕಾರ್ಲೊಸ್ ಟೆವೆಝ್ ಮತ್ತು ಡರೆನ್ ಫ್ಲೆಚರ್ ಉಪಸ್ಥಿತರಿದ್ದರು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಾರೆನ್ ಬಫೆಟ್‌ ಸಂಸ್ಥೆಗಳಿಗೆ 1.5 ಬಿಲಿಯನ್ ಡಾಲರ್ ನಷ್ಟ
ಚಿನ್ನದ ದರ:ಪ್ರತಿ 10ಗ್ರಾಂಗೆ 14,795 ರೂಪಾಯಿ
ಜಾಗತಿಕ 50 ಕಂಪೆನಿಗಳಲ್ಲಿ ಟಾಟಾ, ಎಸ್‌ಬಿಐ,ಇನ್ಫೋಸಿಸ್‌
ಮೇ ಅಂತ್ಯಕ್ಕೆ ಬಡ್ಡಿ ದರ ಪರಿಶೀಲನೆ:ಎಸ್‌ಬಿಐ
ಆರ್ಥಿಕ ಬಿಕ್ಕಟ್ಟು: ಟೊಯೊಟಾಗೆ 4.4 ಬಿಲಿಯನ್ ಡಾಲರ್ ನಷ್ಟ
ಆರ್ಥಿಕತೆ ಸುಧಾರಣೆ: ಆರ್‌ಬಿಐ