ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೊರಗುತ್ತಿಗೆ ನಿರ್ಬಂಧದಿಂದ ವ್ಯವಹಾರಕ್ಕೆ ಧಕ್ಕೆ: ಇನ್ಫೋಸಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊರಗುತ್ತಿಗೆ ನಿರ್ಬಂಧದಿಂದ ವ್ಯವಹಾರಕ್ಕೆ ಧಕ್ಕೆ: ಇನ್ಫೋಸಿಸ್
ಹೊರಗುತ್ತಿಗೆ ಮತ್ತು ಕೆಲಸದ ವೀಸಾ ಹೊಂದಿರುವ ಜನರನ್ನು ನಿರ್ಬಂಧಿಸುವ ವಿದೇಶಿ ರಾಷ್ಟ್ರಗಳು ವಿಶೇಷವಾಗಿ ಅಮೆರಿಕ ಕೈಗೊಳ್ಳುವ ಸಂಭವನೀಯ ಕ್ರಮಗಳ ಬಗ್ಗೆ ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿ ಇನ್ಫೋಸಿಸ್ ಆತಂಕ ವ್ಯಕ್ತಪಡಿಸಿದ್ದು, ಅಂತಹ ಕ್ರಮಗಳಿಂದ ಕಂಪೆನಿಯ ವ್ಯವಹಾರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆಂದು ತಿಳಿಸಿದೆ.

ಫೆಡರಲ್ ಸರ್ಕಾರ ಆರ್ಥಿಕ ನೆರವು ನೀಡಿದ ಕಂಪೆನಿಗಳು ಎಚ್-1ಬಿ ವೀಸಾ ಹೊಂದಿರುವವರ ನೇಮಕವನ್ನು ಒಬಾಮಾ ಆಡಳಿತ ನಿರ್ಬಂಧಿಸಿದ್ದು, ವಿದೇಶಗಳಲ್ಲಿ ಹೊರಗುತ್ತಿಗೆ ಉದ್ಯೋಗ ಸೃಷ್ಟಿಸುವ ವಿದೇಶಿ ಕಂಪೆನಿಗಳಿಗೆ ತೆರಿಗೆ ವಿನಾಯಿತಿಗಳನ್ನು ರದ್ದು ಮಾಡುವುದಾಗಿ ಇತ್ತೀಚೆಗೆ ಪ್ರಕಟಿಸಿದೆ.

ಎರಡೂ ಕ್ರಮಗಳಿಂದ ಭಾರತದ ಐಟಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದ್ದು, ಅವುಗಳ ಪ್ರಮುಖ ಆದಾಯವು ಅಮೆರಿಕದಿಂದ ಬರುತ್ತಿದೆಯೆಂದು ಹೇಳಿದೆ. ಪ್ರಸಕ್ತ ಆರ್ಥಿಕ ಪರಿಸರದಲ್ಲಿ, ಅಸ್ತಿತ್ವದಲ್ಲಿರುವ ಕಾನೂನಿನ ಬದಲಾವಣೆ ಅಥವಾ ನೂತನ ಕಾಯ್ದೆ ಜಾರಿ, ಹೊರಗುತ್ತಿಗೆ ನಿರ್ಬಂಧ ಅಥವಾ ಕೆಲಸದ ವೀಸಾ ಹೊಂದಿರುವವರ ನಿಯೋಜನೆಗೆ ನಿರ್ಬಂಧ ಹೇರುವುದರಿಂದ ನಮ್ಮ ಕಾರ್ಯವ್ಯಾಪ್ತಿಯ ವ್ಯವಹಾರದ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಂದು ಅಮೆರಿಕ ಸಾಲಪತ್ರ ಮತ್ತು ವಿನಿಮಯ ಆಯೋಗದ ಮುಂದೆ ವಾರ್ಷಿಕ ಫೈಲಿಂಗ್ ಸಲ್ಲಿಸುವಾಗ ಅದು ತಿಳಿಸಿದೆ.

ಸುಮಾರು ಶೇ.60ರಷ್ಟು ಭಾರತೀಯ ಐಟಿ-ಹೊರಗುತ್ತಿಗೆ ಕೈಗಾರಿಕೆ ಅಮೆರಿಕ ಕಂಪೆನಿಗಳ ಮೇಲೆ ಅವಲಂಬಿಸಿದ್ದು, ಭಾರತದ ಬಿಪಿಒ ಉದ್ಯಮದಲ್ಲಿ ಸುಮಾರು 17 ಲಕ್ಷ ವೃತ್ತಿಪರರಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐ ಲಾಭದಲ್ಲಿ ಭಾರೀ ಏರಿಕೆ
ಏರ್ ಡೆಕ್ಕನ್ ಸರಕು ಸಾಗಣೆ
ಟೋಯೋಟಾ ನಷ್ಟದಲ್ಲಿ
ಅಗತ್ಯವಸ್ತು ಬೆಲೆ ನಿಯಂತ್ರಣಕ್ಕೆ ಸಮಿತಿ
6 ಭಾರತೀಯ ಭಾಷೆಗಳಲ್ಲಿ ಫೇಸ್‌ಬುಕ್: ಕನ್ನಡ ಇಲ್ಲ
ಮ್ಯಾಂಚೆಸ್ಟರ್‌ನೊಂದಿಗೆ ಏರ್‌ಟೆಲ್ ಒಪ್ಪಂದ