ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬೆಂಗಳೂರು-ದುಬೈ ಮಧ್ಯೆ ಕಿಂಗ್‌ಫಿಶರ್ ವಿಮಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು-ದುಬೈ ಮಧ್ಯೆ ಕಿಂಗ್‌ಫಿಶರ್ ವಿಮಾನ
ದುಬೈ: ಮದ್ಯದ ದೊರೆ ವಿಜಯ ಮಲ್ಯ ಮಾಲಕತ್ವದ ಕಿಂಗ್‌ಫಿಶರ್ ಏರ್‌ಲೈನ್ಸ್ ಭಾರತದ ತಂತ್ರಜ್ಞಾನ ನಗರಿ ಬೆಂಗಳೂರಿನಿಂದ ದುಬೈಗೆ ಜೂನ್ 25ರಿಂದ ಸಂಚಾರ ಸೇವೆಗೆ ಚಾಲನೆ ನೀಡಲಿದೆ.

ಎ320 ವಿಮಾನದ ಹಾರಾಟವು ಬೆಂಗಳೂರಿಂದ ಸಂಜೆ 6.30ಕ್ಕೆ ನಿರ್ಗಮಿಸಿದರೆ ದುಬೈನಲ್ಲಿ ಸ್ಥಳೀಯ ಕಾಲಮಾನ 8.55ಕ್ಕೆ ಇಳಿಯಲಿದೆ. ವಾಪಸು ಪ್ರಯಾಣವು ರಾತ್ರಿ 11.30ಕ್ಕೆ ಆರಂಭವಾಗಿ ಬೆಳಿಗ್ಗೆ 4.45ಕ್ಕೆ ಬೆಂಗಳೂರನ್ನು ತಲುಪಲಿದೆ ಎಂದು ಏರ್‌ಲೈನ್ಸ್ ಅಧಿಕಾರಿಗಳು ಇಲ್ಲಿ ನಡೆದ ಅರೇಬಿಯನ್ ಪ್ರವಾಸ ಮಾರುಕಟ್ಟೆ ಸಂದರ್ಭದಲ್ಲಿ ಮಾಧ್ಯಮಕ್ಕೆ ತಿಳಿಸಿದರು.

ಮಾರ್ಚ್‌ನಲ್ಲಿ ದುಬೈಗೆ ವಿಮಾನ ಸಂಚಾರವನ್ನು ಯೋಜಿಸಲಾಗಿತ್ತು. ಆದರೆ ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ವಿಳಂಬವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದು, ಅಬು ದಾಬಿ ಮತ್ತು ಕೊಲ್ಲಿಯ ಇನ್ನೂ ಕೆಲವು ರಾಷ್ಟ್ರಗಳಿಗೆ ಸಂಚಾರವನ್ನು ಕಿಂಗ್‌ಫಿಷರ್ ಯೋಜಿಸಲಿದೆ ಎಂದು ತಿಳಿಸಿದರು.

ಏರ್‌ಡೆಕ್ಕನ್‌ನನ್ನು ಸ್ವಾಧೀನಕ್ಕೆ ತೆಗೆದುಕೊಂಡ ಬಳಿಕ ಕಿಂಗ್‌ಫಿಶರ್ ತನ್ನ ಮಾರ್ಗ ಜಾಲವನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಕಿಂಗ್‌ಫಿಶರ್ ಬಳಿ 87 ವಿಮಾನಗಳಿದ್ದು ಭಾರತ ಮತ್ತು ವಿದೇಶಗಳ 72 ಸ್ಥಳಗಳಿಗೆ ಪ್ರತಿದಿನ 438 ಫ್ಲೈಟ್‌ಗಳನ್ನು ಹಮ್ಮಿಕೊಂಡಿದೆ. ಬೆಂಗಳೂರಿನಿಂದ ದೇಶೀಯ ಇತರೆ ಸ್ಥಳಗಳಿಗೆ 27 ನೇರ ಫ್ಲೈಟ್‌ಗಳನ್ನು ಕಿಂಗ್‌ಫಿಶರ್ ನಿರ್ವಹಿಸುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ಯಮಕ್ಕೆ ನಷ್ಟ: ಇನ್‌ಫೋಸಿಸ್
ಎಸ್‌ಬಿಐ ಲಾಭದಲ್ಲಿ ಭಾರೀ ಏರಿಕೆ
ಏರ್ ಡೆಕ್ಕನ್ ಸರಕು ಸಾಗಣೆ
ಟೋಯೋಟಾ ನಷ್ಟದಲ್ಲಿ
ಅಗತ್ಯವಸ್ತು ಬೆಲೆ ನಿಯಂತ್ರಣಕ್ಕೆ ಸಮಿತಿ
6 ಭಾರತೀಯ ಭಾಷೆಗಳಲ್ಲಿ ಫೇಸ್‌ಬುಕ್: ಕನ್ನಡ ಇಲ್ಲ