ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾರುತಿ 800 ಸ್ಥಗಿತವಿಲ್ಲ: ಐ.ವಿ.ರಾವ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿ 800 ಸ್ಥಗಿತವಿಲ್ಲ: ಐ.ವಿ.ರಾವ್
ಅತ್ಯಂತ ಜನಪ್ರಿಯ ಕಾರುಗಳಾದ ಮಾರುತಿ 800 ಮತ್ತು ಆಮ್ನಿ ತಯಾರಿಕೆಯನ್ನು ಸ್ಥಗಿತಗೊಳಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಮಾರುತಿ ಸುಜುಕಿ ಕಂಪೆನಿ ಭಾನುವಾರ ಸ್ಪಷ್ಟಪಡಿಸಿದೆ.

ಮಾರುತಿ 800 ಸ್ಥಗಿತದ ನಿರ್ಧಾರ ಇನ್ನೂ ಕೈಗೊಂಡಿಲ್ಲ. ಮಾರಾಟ ಬೇಕೋ ಅಥವಾ ಬೇಡ ಎನ್ನುವ ಬಗ್ಗೆ ಕಂಪೆನಿಯ ಮಾರಾಟ ವಿಭಾಗವು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕಂಪೆನಿಯ ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ ಐ.ವಿ.ರಾವ್ ತಿಳಿಸಿದ್ದಾರೆ.

2010ರಿಂದ ಜಾರಿಯಾಗಲಿರುವ ಭಾರತ್ ಸ್ಟೇಜ್ 4ಎಮಿಷನ್ಸ್(ಮಾಲಿನ್ಯ ಹೊರಸೂಸುವಿಕೆ) ನೀತಿಯನ್ನು ಪಾಲಿಸುವ ನಿಟ್ಟಿನಲ್ಲಿ ಮಾರುತಿ ಹಾಗೂ ಆಮ್ನಿಗಳನ್ನು ಅತ್ಯಾಧುನೀಕರಿಸಲಾಗುತ್ತಿದೆ.

2015ರೊಳಗೆ ಮಾರುತಿ 800 ಹಾಗೂ ಆಮ್ನಿಯನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಈ ಹಿಂದೆ ಸಂಸ್ಥೆ ಘೋಷಿಸಿತ್ತು. ಈ ಕಾರುಗಳನ್ನು ಆಧುನೀಕರಣ ಮಾಡಬೇಕೆಂದು ಮಾರುಕಟ್ಟೆ ವಿಭಾಗದವರು ಸಲಹೆ ಮಾಡಿದ್ದು, ಇದನ್ನು ಪರಿಗಣಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಿವೇಶನ ನೀಡುವುದಾಗಿ ಮೋಸ: ಕಂಟ್ರಿ‍ ಕ್ಲಬ್‌ಗೆ ದಂಡ
'ನ್ಯಾನೋ'ದಿಂದ ಮಾರುತಿ, ಆಮ್ನಿಗೆ ಧಕ್ಕೆಯಿಲ್ಲ
ಬೆಂಗಳೂರು-ದುಬೈ ಮಧ್ಯೆ ಕಿಂಗ್‌ಫಿಶರ್ ವಿಮಾನ
ಹೊರಗುತ್ತಿಗೆ ನಿರ್ಬಂಧದಿಂದ ವ್ಯವಹಾರಕ್ಕೆ ಧಕ್ಕೆ: ಇನ್ಫೋಸಿಸ್
ಎಸ್‌ಬಿಐ ಲಾಭದಲ್ಲಿ ಭಾರೀ ಏರಿಕೆ
ಏರ್ ಡೆಕ್ಕನ್ ಸರಕು ಸಾಗಣೆ