ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏಪ್ರಿಲ್‌ ತಿಂಗಳಲ್ಲಿ 'ವೇಗ' ಕಂಡ ಕಾರು-ಬೈಕ್ ಮಾರಾಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏಪ್ರಿಲ್‌ ತಿಂಗಳಲ್ಲಿ 'ವೇಗ' ಕಂಡ ಕಾರು-ಬೈಕ್ ಮಾರಾಟ
ದೇಶೀಯ ಕಾರು ಮಾರಾಟ ಏಪ್ರಿಲ್ ತಿಂಗಳಲ್ಲಿ ಶೇ.4.20ರಷ್ಟು ಹೆಚ್ಚಳ ಕಂಡಿದ್ದು, ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ 98,752 ಕಾರು ಮಾರಾಟವಾಗಿದ್ದರೆ, ಪ್ರಸಕ್ತ ಏಪ್ರಿಲ್ ತಿಂಗಳಿನಲ್ಲಿ 1,02,899 ಕಾರು ಮಾರಾಟವಾಗಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್(ಎಸ್‌ಐಎಎಂ) ನೂತನವಾಗಿ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ, ಮೋಟಾರ್ ಬೈಕ್ ಮಾರಾಟದಲ್ಲಿಯೂ ಕೂಡ ದೇಶದಲ್ಲಿ ಕಳೆದ ಏಪ್ರಿಲ್‌ಗಿಂತ ಈ ಬಾರಿ ಶೇ.12.11ರಷ್ಟು ಹೆಚ್ಚಳ ಕಂಡಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ 5,01,592ಬೈಕ್ ಮಾರಾಟವಾಗಿದ್ದರೆ, ಈ ಸಾಲಿನ ಏಪ್ರಿಲ್‌ನಲ್ಲಿ 5,62, 357ರಷ್ಟು ಮಾರಾಟವಾಗಿದೆ.

ಒಟ್ಟಾರೆ ದ್ವಿಚಕ್ರ ವಾಹನಗಳ ಏಪ್ರಿಲ್ ತಿಂಗಳ ಮಾರಾಟದಲ್ಲಿ ಶೇ.13.71ರಷ್ಟು ಹೆಚ್ಚಳ ಕಂಡಿದೆ. ಕಳೆದ ಏಪ್ರಿಲ್‌ನಲ್ಲಿ 6,16,468 ದ್ವಿಚಕ್ರ ವಾಹನ ಮಾರಾಟವಾಗಿದ್ದು, ಈ ಬಾರಿ 7,00,995ರಷ್ಟು ಮಾರಾಟವಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರುತಿ 800 ಸ್ಥಗಿತವಿಲ್ಲ: ಐ.ವಿ.ರಾವ್
ನಿವೇಶನ ನೀಡುವುದಾಗಿ ಮೋಸ: ಕಂಟ್ರಿ‍ ಕ್ಲಬ್‌ಗೆ ದಂಡ
'ನ್ಯಾನೋ'ದಿಂದ ಮಾರುತಿ, ಆಮ್ನಿಗೆ ಧಕ್ಕೆಯಿಲ್ಲ
ಬೆಂಗಳೂರು-ದುಬೈ ಮಧ್ಯೆ ಕಿಂಗ್‌ಫಿಶರ್ ವಿಮಾನ
ಹೊರಗುತ್ತಿಗೆ ನಿರ್ಬಂಧದಿಂದ ವ್ಯವಹಾರಕ್ಕೆ ಧಕ್ಕೆ: ಇನ್ಫೋಸಿಸ್
ಎಸ್‌ಬಿಐ ಲಾಭದಲ್ಲಿ ಭಾರೀ ಏರಿಕೆ