ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆದಾಯ ಗಳಿಕೆ: ಎನ್‌ಆರ್‌ಐ ನೇತೃತ್ವದ ಸಿಟಿಗ್ರೂಪ್ ಪ್ರಥಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆದಾಯ ಗಳಿಕೆ: ಎನ್‌ಆರ್‌ಐ ನೇತೃತ್ವದ ಸಿಟಿಗ್ರೂಪ್ ಪ್ರಥಮ
ಅಮೆರಿಕದಲ್ಲಿ ಒಂದೆಡೆ ಸಿಟಿ ಗ್ರೂಪ್ಸ್‌ನ ಅತ್ಯಂತ ಕೆಟ್ಟ ಸಿಇಓ ಎಂಬ ಅಪಖ್ಯಾತಿಗೆ ವಿಕ್ರಮ್ ಪಂಡಿತ್ ಒಳಗಾಗಿದ್ದರೆ, ಮತ್ತೊಂದೆಡೆ ಬ್ಯಾಂಕಿನ ವಾರ್ಷಿಕ ತ್ರೈಮಾಸಿಕ ಲೆಕ್ಕಚಾರದಲ್ಲಿ ಉತ್ತಮ ಬೆಳವಣಿಗೆ ಕಂಡಿರುವ ಭಾರತೀಯ ಮೂಲದ ವ್ಯಕ್ತಿ ನಡೆಸುತ್ತಿರುವ ಅಮೆರಿಕನ್ ಕಂಪೆನಿ ಇದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಾಗತಿಕ ಆರ್ಥಿಕ ಹಿಂಜರಿತದಿಂದ ಅಮೆರಿಕದ ಬ್ಯಾಂಕುಗಳೆಲ್ಲ ದಿವಾಳಿ ಅಂಚಿನಲ್ಲಿರುವ ತನ್ಮಧ್ಯೆಯೇ, ಸಿಟಿ ಗ್ರೂಪ್ 2009ರ ತ್ರೈಮಾಸಿಕ ಲೆಕ್ಕದಲ್ಲಿ ಆದಾಯ ಗಳಿಸಿರುವುದಾಗಿ ಹೇಳಿದೆ. ಅಲ್ಲದೇ ಐಟಿ ಟೆಕ್ನಾಲಜಿಯ ಅಮೆರಿಕನ್ ಬ್ಲೂ ಚಿಪ್ ಕಂಪೆನಿ ಪ್ರಸಕ್ತ ತ್ರೈಮಾಸಿಕ ವರ್ಷದಲ್ಲಿ ಆದಾಯಗಳಿಸಿದ ಮತ್ತೊಂದು ಅಮೆರಿಕನ್ ಕಂಪೆನಿಯಾಗಿದೆ.

ಅದೇ ರೀತಿ ಇಂದ್ರಾ ನೂಯಿ ಆಡಳಿತದ ಪಪ್ಸೆಕೋ ಹಾಗೂ ಶಾಂತನು ನಾರಾಯಣ್ ನೇತೃತ್ವದ ಆಡೋಬ್ ಸಿಸ್ಟಮ್ಸ್ ತ್ರೈಮಾಸಿಕ ಲೆಕ್ಕಚಾರ ನೀಡಲು ನಿರಾಕರಿಸಿವೆ. ರಮಣಿ ಅಯ್ಯರ್ ಅವರ ಹಾರ್ಟ್ ಫೋರ್ಡ್ ಫೈನಾಸ್ಶಿಯಲ್ ಸರ್ವಿಸ್ ಕೂಡ ಪ್ರಸಕ್ತ ಸಾಲಿನ ತ್ರೈಮಾಸಿಕ ವರದಿಯನ್ವಯ ಭಾರೀ ನಷ್ಟ ಅನುಭವಿಸಿದೆ. ಭಾರತೀಯ ಮೂಲದ ಅರ್ಸೆಲ್ ಮಿತ್ತಲ್ ಕೂಡ ಭಾರೀ ನಷ್ಟದ ಬಿಸಿ ಅನುಭವಿಸಿದ್ದಾರೆ.

ಲಕ್ಷ್ಮಿ ಮಿತ್ತಲ್ 2009ರ ಮಾರ್ಚ್ 31ರ ತ್ರೈಮಾಸಿಕ ಲೆಕ್ಕಚಾರದಲ್ಲಿ 1.1ಬಿಲಿಯನ್ ಭಾರೀ ಮೊತ್ತದ ನಷ್ಟ ಅನುಭವಿಸಿದ್ದರು. ಕಳೆದ ತಿಂಗಳು ವಾಣಿಜ್ಯ ಮ್ಯಾಗಜಿನ್ ಕೊಂಡೇ ನಾಸ್ಟ್ ಪೋರ್ಟ್‌ಪೋಲಿಯೋ ಅಮೆರಿಕದ ಇತಿಹಾಸದ 20ಮಂದಿ ಅತ್ಯಂತ ಕೆಟ್ಟ ಸಿಇಓಗಳಲ್ಲಿ ನಾಗಪುರ್ ಮೂಲದ ವಿಕ್ರಮ್ ಪಂಡಿತ್ ಕೂಡ ಒಬ್ಬರೆಂದು ತಿಳಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
4ತಿಂಗಳಲ್ಲಿ ಟಿಡಿಎಸ್ ಹಣ ಮರುಪಾವತಿ: ಸಚಿವಾಲಯ
ಏಪ್ರಿಲ್‌ ತಿಂಗಳಲ್ಲಿ 'ವೇಗ' ಕಂಡ ಕಾರು-ಬೈಕ್ ಮಾರಾಟ
ಮಾರುತಿ 800 ಸ್ಥಗಿತವಿಲ್ಲ: ಐ.ವಿ.ರಾವ್
ನಿವೇಶನ ನೀಡುವುದಾಗಿ ಮೋಸ: ಕಂಟ್ರಿ‍ ಕ್ಲಬ್‌ಗೆ ದಂಡ
'ನ್ಯಾನೋ'ದಿಂದ ಮಾರುತಿ, ಆಮ್ನಿಗೆ ಧಕ್ಕೆಯಿಲ್ಲ
ಬೆಂಗಳೂರು-ದುಬೈ ಮಧ್ಯೆ ಕಿಂಗ್‌ಫಿಶರ್ ವಿಮಾನ