ದೇಶದ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ ತಮ್ಮ ಸಂಸ್ಥೆಯ ಆರ್ ಎಂಡ್ ಡಿ ವಿಭಾಗದಲ್ಲಿ 2010ರ ಮಾರ್ಚ್ ಅಂತ್ಯದೊಳಗೆ ನೌಕರರ ಸಂಖ್ಯೆಯನ್ನು ಸಾವಿರಕ್ಕೆ ಏರಿಸಲಾಗುವುದು ಎಂದು ತಿಳಿಸಿದೆ.
ಮಾರುತಿ ಸುಜುಕಿ ಇಂಡಿಯಾ ಆರ್ ಎಂಡ್ ಡಿ ವಿಭಾಗದಲ್ಲಿ ಪ್ರಸಕ್ತವಾಗಿ 720ನೌಕರರಿದ್ದಾರೆ, ಆ ಸಂಖ್ಯೆಯನ್ನು 2010ರ ಮಾರ್ಚ್ ಅಂತ್ಯದೊಳಗೆ ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಅನುಭವ ಹೊಂದಿರುವವರಿಗೆ ಪ್ರಾಧಾನ್ಯತೆ ನೀಡಲಾಗುವುದು ಎಂದು ಮಾರುತಿ ಸುಜುಕಿ ಇಂಡಿಯಾ(ಎಂಎಸ್ಐ)ದ ಐ.ವಿ.ರಾವ್ ಹೇಳಿದರು.
2010ರಿಂದ ಜಾರಿಯಾಗಲಿರುವ ಭಾರತ್ ಸ್ಟೇಜ್ 4ಎಮಿಷನ್ಸ್ (ಮಾಲಿನ್ಯ ಹೊರಸೂಸುವಿಕೆ) ನೀತಿಯನ್ನು ಪಾಲಿಸುವ ನಿಟ್ಟಿನಲ್ಲಿ ಮಾರುತಿ ಹಾಗೂ ಆಮ್ನಿಗಳನ್ನು ಅತ್ಯಾಧುನೀಕರಿಸಲಾಗುತ್ತಿದೆ ಎಂದು ಹೇಳಿದರು.
ಮಾರುತಿ ಸುಜುಕಿ ದೇಶದ ಪ್ರಥಮ ಬಿಎಸ್-1v ಮಾಲಿನ್ಯ ಹೊರಸೂಸುವಿಕೆ ಕಾರು ರಿಟ್ಜ್ ಅನ್ನು ಮೇ 15ರಂದು ಮಾರುಕಟ್ಟೆಗೆ ಬಿಡಲಾಗುವುದು ಎಂದು ಕಂಪೆನಿ ತಿಳಿಸಿದೆ. |