ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವೋಡ್ಕಾ ಜತೆ ಕೈ ಜೋಡಿಸುವತ್ತ ಮಲ್ಯ ಚಿತ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೋಡ್ಕಾ ಜತೆ ಕೈ ಜೋಡಿಸುವತ್ತ ಮಲ್ಯ ಚಿತ್ತ
ಜಗತ್ತಿನಲ್ಲಿಯೇ ಖ್ಯಾತಿ ಪಡೆದ ಅಮೆರಿಕ ಮೂಲದ ಲಿಯೋಪಾರ್ಡ್ ವೋಡ್ಕಾ ಕಂಪೆನಿ ಜತೆ ಸಖ್ಯ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕದ ಮದ್ಯ ದೊರೆ ವಿಜಯ್ ಮಲ್ಯ ದೃಷ್ಟಿ ನೆಟ್ಟಿರುವುದಾಗಿ ಆಪ್ತ ಮೂಲಗಳು ತಿಳಿಸಿವೆ.

ವೋಡ್ಕಾ ಜತೆ ಪಾಲುದಾರರಾಗಲು ಮಾತುಕತೆ ನಡೆಸುತ್ತಿರುವ ಮಲ್ಯ ಅವರು, ಟ್ರೆಂಡಿ ಸ್ಪಿರಿಟ್ ಬ್ರ್ಯಾಂಡ್ ಅನ್ನು ಕೂಡ ಖರೀದಿಸುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ.

ಈ ಕುರಿತು ಯುನೈಟೆಡ್ ಕಿಂಗ್‌ಡಂನ ಯುನೈಟೆಡ್ ಸ್ಪಿರಿಟ್ಸ್‌ನ ದೈತ್ಯ ಕಂಪೆನಿ ವೈಟೆ ಎಂಡ್ ಮ್ಯಾಕೆ ಜತೆಗೆ ಮಾತುಕತೆ ನಡೆಸಿದ್ದಾರೆ. ಆದರೆ ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಲಭಿಸಿಲ್ಲ.

ವೋಡ್ಕಾ ಕಂಪೆನಿ ಕೂಡ ಮಲ್ಯ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಹಮತ ಸೂಚಿಸಿರುವುದಾಗಿ ಸಂಡೇ ಟೈಮ್ಸ್ ವರದಿ ತಿಳಿಸಿದೆ. ವೋಡ್ಕಾ ಕಂಪೆನಿಯ ಜತೆ ಮಲ್ಯ ಅವರು ಸಖ್ಯ ಬೆಳೆಸುವ ಮೂಲಕ ಜಾಗತಿಕವಾಗಿ ತಮ್ಮ ವಹಿವಾಟನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೊಲಿವಿಯಾದಲ್ಲಿ ನೈಸರ್ಗಿಕ ಅನಿಲ ಸಂಸ್ಥೆ: ಜಿಂದಾಲ್
ಸತ್ಯಂ ವಂಚನೆಯಲ್ಲಿ ನನ್ನ ಪಾತ್ರವಿಲ್ಲ: ರಾಮರಾಜು
ಮಾಧ್ಯಮ ಆದಾಯದಲ್ಲಿ ಹೆಚ್ಚಳ: ಅಸೋಚಾಮ್
ಕಚ್ಚಾ ಉಕ್ಕು ಉತ್ಪಾದನೆ ಏರಿಕೆ: ಜೆಎಸ್‌ಡಬ್ಲ್ಯೂ
ಮ್ಯಾಕ್ಸ್ ನ್ಯೂಯಾರ್ಕ್‌ನಿಂದ 'ಸ್ಮಾರ್ಟ್ ಎಕ್ಸ್‌ಪ್ರೆಸ್'
ಸತ್ಯಂ: ಪರಿಹಾರ ಮನವಿ ವಿಚಾರಣೆಗೆ ಗ್ರಾಹಕ ವೇದಿಕೆ ನಕಾರ