ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೆಲಸ ಬೇಕಿದ್ರೆ ಭಾರತಕ್ಕೆ ಹೋಗಿ,ಇಲ್ಲಾಂದ್ರೆ ವಜಾ: ಟೆಕ್ಸ್‌ಟೈಲ್ ಕಂಪೆನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಲಸ ಬೇಕಿದ್ರೆ ಭಾರತಕ್ಕೆ ಹೋಗಿ,ಇಲ್ಲಾಂದ್ರೆ ವಜಾ: ಟೆಕ್ಸ್‌ಟೈಲ್ ಕಂಪೆನಿ
'ನೌಕರಿ ಬೇಕಿದ್ದರೆ ನೀವು ಭಾರತಕ್ಕೆ ಹೋಗಬೇಕು ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳಬೇಕು' ಹೀಗೆಂದು ಕಂಪೆನಿಯ ನೌಕರರಿಗೆ ಸೂಚನೆ ನೀಡಿರುವುದು ಫ್ರಾನ್ಸ್‌ನ ವಾಯುವ್ಯ ಪ್ರದೇಶದಲ್ಲಿನ ಟೆಕ್ಸ್‌ಟೈಲ್ ಕಂಪೆನಿ.

ಫ್ರಾನ್ಸ್‌ನ ವಾಯುವ್ಯ ಭಾಗದ ಕಾಸ್ಟ್ರೆಸ್‌ನಲ್ಲಿ ಇರುವ ಕೆರ್ರೆಮನ್ ಟೆಕ್ಸ್‌ಟೈಲ್ ಪ್ಲ್ಯಾಂಟ್‌ನ ಒಂಬತ್ತು ಮಂದಿ ನೌಕರರಿಗೆ ಕಂಪೆನಿ ಅಂತಿಮವಾಗಿ ನೀಡಿರುವ ಅವಕಾಶ ಇದಾಗಿದೆ. ನಿಮಗೆ ನೌಕರಿ ಬೇಕಿದ್ದರೆ ಬೆಂಗಳೂರಿನಲ್ಲಿರುವ ಘಟಕಕ್ಕೆ ಹೋಗಿ, ಇಲ್ಲಾಂದ್ರೆ ಕೆಲಸದಿಂದ ವಜಾ ಎಂದು ಎಚ್ಚರಿಕೆ ನೀಡಿದೆ. ಪ್ರತಿ ತಿಂಗಳು 48ಪೌಂಡ್ ಸಂಬಳ ಪಡೆಯುವ ಈ ನೌಕರರು ಇದೀಗ ಇಕ್ಕಟ್ಟಿನಲ್ಲಿ ಸಿಲುಕಿರುವುದಾಗಿ ದಿ ಡೈಲಿ ಟೆಲಿಗ್ರಾಫ್ ವರದಿ ವಿವರಿಸಿದೆ.

ನೌಕರರಿಗೆ ಈ ರೀತಿಯಾಗಿ ಪ್ರಸ್ತಾಪ ಮುಂದಿಟ್ಟಿರುವುದಕ್ಕೆ ನೌಕರರ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ವಜಾಗೊಳಿಸಲು ಹಿಂದೆ-ಮುಂದೆ ನೋಡುವ ಕಂಪೆನಿ ಅನಾವಶ್ಯಕವಾಗಿ ಇಂತಹ ಪ್ರಸ್ತಾಪ ಮುಂದಿಟ್ಟಿದೆ ಎಂದು ಹೇಳಿದೆ.

ನೌಕರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವರ್ಗಾವಣೆಗೊಳ್ಳುವ ನೌಕರರಿಗೆ ವಾರ್ಷಿಕವಾಗಿ 50ಪೌಂಡ್ಸ್ ಬೋನಸ್, 800ಪೌಂಡ್ ಪುನರ್ ವಸತಿ ವೆಚ್ಚ ಹಾಗೂ ವಿಮಾನ ಟಿಕೆಟ್‌‌ಗಳನ್ನು ನೀಡಲಾಗುತ್ತೆ ಎಂದು ಮಾಧ್ಯಮ ವರದಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೋಡ್ಕಾ ಜತೆ ಕೈ ಜೋಡಿಸುವತ್ತ ಮಲ್ಯ ಚಿತ್ತ
ಬೊಲಿವಿಯಾದಲ್ಲಿ ನೈಸರ್ಗಿಕ ಅನಿಲ ಸಂಸ್ಥೆ: ಜಿಂದಾಲ್
ಸತ್ಯಂ ವಂಚನೆಯಲ್ಲಿ ನನ್ನ ಪಾತ್ರವಿಲ್ಲ: ರಾಮರಾಜು
ಮಾಧ್ಯಮ ಆದಾಯದಲ್ಲಿ ಹೆಚ್ಚಳ: ಅಸೋಚಾಮ್
ಕಚ್ಚಾ ಉಕ್ಕು ಉತ್ಪಾದನೆ ಏರಿಕೆ: ಜೆಎಸ್‌ಡಬ್ಲ್ಯೂ
ಮ್ಯಾಕ್ಸ್ ನ್ಯೂಯಾರ್ಕ್‌ನಿಂದ 'ಸ್ಮಾರ್ಟ್ ಎಕ್ಸ್‌ಪ್ರೆಸ್'