ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಲಕ್ಸಂಬರ್ಗ್: ಮಿತ್ತಲ್ ಕೇಂದ್ರ ಕಚೇರಿ ಮೇಲೆ ನೌಕರರ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಕ್ಸಂಬರ್ಗ್: ಮಿತ್ತಲ್ ಕೇಂದ್ರ ಕಚೇರಿ ಮೇಲೆ ನೌಕರರ ದಾಳಿ
ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ತಟ್ಟಿರುವ ಅರ್ಸೆಲೋ ಮಿತ್ತಲ್ ಒಡೆತನದ ಸ್ಟೀಲ್ ಕಂಪೆನಿಯ ನೌಕರರನ್ನು ತಾತ್ಕಾಲಿಕವಾಗಿ ಕೆಲಸದಿಂದ ವಜಾಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಿತ್ತಲ್ ಅವರ ಲಕ್ಸಂಬರ್ಗ್‌ನಲ್ಲಿನ ಹೆಡ್‌ಕ್ವಾಟರ್ಸ್ ಮುಖ್ಯದ್ವಾರವನ್ನು ಒಡೆಯುವ ಹಾಗೂ ಸ್ಮೋಕ್ ಬಾಂಬ್‌ಗಳನ್ನು ಎಸೆದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಸೋಮವಾರ ಕಂಪೆನಿಯ ಶೇರುದಾರರ ವಾರ್ಷಿಕ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಲ್ಜಿಯಂ ಹಾಗೂ ಫ್ರಾನ್ಸ್‌ ಸೇರಿದಂತೆ ವಿವಿಧೆಡೆಯ ಸುಮಾರು ಸಾವಿರಕ್ಕೂ ಅಧಿಕ ನೌಕರರು ಹೆಡ್‌ಕ್ವಾಟರ್ಸ್‌ ದ್ವಾರವನ್ನು ಮುರಿಯುವ ಪ್ರಯತ್ನಕ್ಕೆ ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿತ್ತು.

ಮುಖ್ಯದ್ವಾರದಲ್ಲಿಯೇ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿತ್ತು. ಹಾಲ್‌ ಒಳಭಾಗದಲ್ಲಿ ಸ್ಮೋಕ್ ಬಾಂಬ್‌ಗಳನ್ನು ಎಸೆದ ಪರಿಣಾಮ ಕೆಳ ಅಂತಸ್ತಿನಿಂದ ಕೂಡಲೇ ಹೊರಬರಬೇಕಾಯಿತು ಎಂದು ಮಾಧ್ಯಮ ವರದಿಗಾರರು ತಿಳಿಸಿದ್ದಾರೆ.

ಪ್ರತಿಭಟನಾಕಾರರಿಂದ ಶೇರುದಾರರ ಸಭೆಗಾಗಲಿ ಅಥವಾ ಲಂಚ್‌ಗಾಗಲಿ ಯಾವುದೇ ತೊಂದರೆ ಆಗದೆ, ಕಟ್ಟಡದ ಮೇಲ್ಭಾಗದಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದ್ದರು.

ಕಳೆದ ವರ್ಷ ಜಾಗತಿಕವಾಗಿ ಕಂಗೆಡಿಸಿದ್ದ ಆರ್ಥಿಕ ಹಿಂಜರಿತದ ಹೊಡೆತವನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರಪಂಚದ ಸ್ಟೀಲ್ ಉತ್ಪಾದನೆಯ ದೈತ್ಯ ಎಂದೇ ಖ್ಯಾತಿ ಗಳಿಸಿದ್ದ ಅರ್ಸೆಲ್ಲೋ ಮಿತ್ತಲ್ ಸ್ಟೀಲ್ ಉತ್ಪಾದನೆಯಲ್ಲಿ ಕಡಿತಗೊಳಿಸಿದ್ದರು. ಏತನ್ಮಧ್ಯೆ ನೌಕರರನ್ನು ತಾತ್ಕಾಲಿಕವಾಗಿ ವಜಾಗೊಳಿಸುವ ಕ್ರಮಕ್ಕೆ ಮುಂದಾಗಿರುವುದನ್ನು ವಿರೋಧಿಸಿ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿ.ಎಸ್.ಭಾರ್ತಿ ಏರ್ ಕಮಾಂಡಿಂಗ್ ಆಫೀಸರ್
ಕೆಲಸ ಬೇಕಿದ್ರೆ ಭಾರತಕ್ಕೆ ಹೋಗಿ,ಇಲ್ಲಾಂದ್ರೆ ವಜಾ: ಟೆಕ್ಸ್‌ಟೈಲ್ ಕಂಪೆನಿ
ವೋಡ್ಕಾ ಜತೆ ಕೈ ಜೋಡಿಸುವತ್ತ ಮಲ್ಯ ಚಿತ್ತ
ಬೊಲಿವಿಯಾದಲ್ಲಿ ನೈಸರ್ಗಿಕ ಅನಿಲ ಸಂಸ್ಥೆ: ಜಿಂದಾಲ್
ಸತ್ಯಂ ವಂಚನೆಯಲ್ಲಿ ನನ್ನ ಪಾತ್ರವಿಲ್ಲ: ರಾಮರಾಜು
ಮಾಧ್ಯಮ ಆದಾಯದಲ್ಲಿ ಹೆಚ್ಚಳ: ಅಸೋಚಾಮ್