ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಇಳಿಮುಖ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಇಳಿಮುಖ
ಜಾಗತಿಕ ಆರ್ಥಿಕ ಹಿಂಜರಿತ ಬಿಸಿ ಇನ್ನೂ ಆರಿಲ್ಲದ ಪರಿಣಾಮ 'ವಿಸಿಟ್ ಇಂಡಿಯಾ 2009' ಪ್ರಚಾರದ ನಡುವೆಯೂ ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಂಕಿ-ಅಂಶದಿಂದ ಬಹಿರಂಗಗೊಂಡಿದೆ.

ಪ್ರಸಕ್ತ ಸಾಲಿನ ಏಪ್ರಿಲ್‌ನಲ್ಲಿ 3.71ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದು, ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ 3.84ಲಕ್ಷ ಮಂದಿ ವಿದೇಶಿಯರು ಭೇಟಿ ನೀಡಿದ್ದರು. ಆದರೆ 2007ರ ಏಪ್ರಿಲ್ ಮಾಸದಲ್ಲಿ 3.51ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದರು.

ಏನೇ ಆದರೂ ವಿದೇಶಿ ವಿನಿಮಯ ವಹಿವಾಟಿನಲ್ಲಿ ಏರಿಕೆ ಕಂಡಿದೆ ಎಂದಿರುವ ಇಲಾಖೆ, ಕಳೆದ ವರ್ಷ ಏಪ್ರಿಲ್‌‌ನಲ್ಲಿ 3,773ಕೋಟಿ ರೂ.ಆದಾಯ ಗಳಿಸಿದ್ದರೆ, ಪ್ರಸಕ್ತ ಸಾಲಿನ ಏಪ್ರಿಲ್‌ನಲ್ಲಿ ಆ ಮೊತ್ತ 4,061ಕೋಟಿ ರೂ.ಗೆ ಏರಿಕೆ ಕಂಡಿದೆ.

ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವಾಲಯ ವಿಸಿಟ್ ಇಂಡಿಯಾ 2009 ಎಂಬ ಪ್ರಚಾರ ಕಾರ್ಯವನ್ನು ಕೈಗೊಂಡಿತ್ತು. ಪ್ರವಾಸ ಹಾಗೂ ಪ್ರವಾಸಿಗರು ವಾಸ್ತವ್ಯ ಸೇರಿದಂತೆ ಪ್ರಪಂಚದ 20 ಪ್ರಮುಖ ನಗರಗಳಲ್ಲಿ ಪ್ರಚಾರ ಕಾರ್ಯ ನಡೆಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ: 4 ಉನ್ನತ ಅಧಿಕಾರಿಗಳು ಕಂಪೆನಿಗೆ ಗುಡ್‌ ಬೈ
ಕಬ್ಬು ಉತ್ಪಾದನೆ ಶೇ.17ರಷ್ಟು ಕುಸಿತ
ಕೈಗಾರಿಕಾ, ಗಣಿಗಾರಿಕೆ ಬೆಳವಣಿಗೆ ಕುಂಠಿತ
4 ವಿಶೇಷ ಲೆಕ್ಕಪರಿಶೋಧಕರ ನೇಮಕ: ಟೆಲಿಕಾಂ
ಲಕ್ಸಂಬರ್ಗ್: ಮಿತ್ತಲ್ ಕೇಂದ್ರ ಕಚೇರಿ ಮೇಲೆ ನೌಕರರ ದಾಳಿ
ವಿ.ಎಸ್.ಭಾರ್ತಿ ಏರ್ ಕಮಾಂಡಿಂಗ್ ಆಫೀಸರ್