ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತ: ಐಐಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತ: ಐಐಪಿ
ಜಾಗತಿಕ ಹಣಕಾಸು ಹಿಂಜರಿತದ ಬಿಸಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮಾರ್ಚ್ ತಿಂಗಳ ಕೈಗಾರಿಕಾ ಉತ್ಪಾದನೆ ಸತತವಾಗಿ ಮೂರನೇ ತಿಂಗಳಿಗೆ ಶೇ.2.3ರಷ್ಟು ಇಳಿಕೆ ಕಂಡಿದ್ದು, ಇದು ಕಳೆದ 16ವರ್ಷಗಳಲ್ಲಿ ಈ ಮಟ್ಟಿಗಿನ ಕುಸಿತ ಕಂಡಿರುವುದು ಇದೇ ಪ್ರಥಮ ಬಾರಿ.

ತಯಾರಿಕಾ ವಲಯದಲ್ಲಿ ಶೇ.3.3ರಷ್ಟು ಉತ್ಪಾದನೆ ಕುಸಿದಿರುವುದು ಇದಕ್ಕೆ ಕಾರಣ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದಲ್ಲಿ ಸುಮಾರು ಶೇ.80ರಷ್ಟು ಉತ್ಪನ್ನಗಳು ತಯಾರಿಕಾ ವಲಯಕ್ಕೆ ಸೇರಿದ್ದು, ಈ ವಲಯ 2008ರ ಮಾರ್ಚ್‌ನಲ್ಲಿ ಶೇ.5.7ರಷ್ಟು ಬೆಳವಣಿಗೆ ಸಾಧಿಸಿತ್ತು.

ತೀವ್ರವಾದಂಥ ಹಣಕಾಸು ಬಿಕ್ಕಟ್ಟು ಎದುರಿಸಿದ 2008-09ರಲ್ಲಿ ಕೈಗಾರಿಕಾ ಬೆಳವಣಿಗೆ ಶೇ.2.4ಕ್ಕೆ ಇಳಿಮುಖವಾಗಿದೆ. ಇದರ ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ.8.5ರಷ್ಟಿತ್ತು ಎಂದು ಸರ್ಕಾರದ ಐಐಪಿ ಪ್ರಕಟಣೆ ತಿಳಿಸಿದೆ.

ಕೈಗಾರಿಕಾ ಉತ್ಪಾದನೆ ಹೆಚ್ಚಿಸಲು ಮತ್ತೊಂದು ಆರ್ಥಿಕ ಚೇತರಿಕೆ ಪ್ಯಾಕೇಜ್ ಅಗತ್ಯವಿದೇಯ ಎಂಬ ಪ್ರಶ್ನೆಗೆ ಸಾರ್ವತ್ರಿಕ ಚುನಾವಣೆ ನಂತರ ಅಧಿಕಾರ ವಹಿಸಿಕೊಳ್ಳಲಿರುವ ಹೊಸ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಪ್ರಧಾನಿ ಆರ್ಥಿಕ ವಲಯ ಮಂಡಳಿ ಅಧ್ಯಕ್ಷ ಸುರೇಶ್ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಇಳಿಮುಖ
ಸತ್ಯಂ: 4 ಉನ್ನತ ಅಧಿಕಾರಿಗಳು ಕಂಪೆನಿಗೆ ಗುಡ್‌ ಬೈ
ಕಬ್ಬು ಉತ್ಪಾದನೆ ಶೇ.17ರಷ್ಟು ಕುಸಿತ
ಕೈಗಾರಿಕಾ, ಗಣಿಗಾರಿಕೆ ಬೆಳವಣಿಗೆ ಕುಂಠಿತ
4 ವಿಶೇಷ ಲೆಕ್ಕಪರಿಶೋಧಕರ ನೇಮಕ: ಟೆಲಿಕಾಂ
ಲಕ್ಸಂಬರ್ಗ್: ಮಿತ್ತಲ್ ಕೇಂದ್ರ ಕಚೇರಿ ಮೇಲೆ ನೌಕರರ ದಾಳಿ