ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪ್ರಕೃತಿ ಸೌಂದರ್ಯ ವೀಕ್ಷಣೆಗಾಗಿ 'ಜೆಟ್‌2 ಕೇರಳ' ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಕೃತಿ ಸೌಂದರ್ಯ ವೀಕ್ಷಣೆಗಾಗಿ 'ಜೆಟ್‌2 ಕೇರಳ' ಆರಂಭ
ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜೆಟ್ ಏರ್‌ವೇಸ್ ಹಾಗೂ ಕೇರಳ ಪ್ರವಾಸೋದ್ಯಮ ಇಲಾಖೆ ಕೈಜೋಡಿಸಿದ್ದು, ಈ ನಿಟ್ಟಿನಲ್ಲಿ ಮುಂಬೈನಿಂದ ಆರಂಭಿಕವಾಗಿ 'ಜೆಟ್‌2 ಕೇರಳ' ದೇಶಿಯ ವಿಮಾನ ಸಂಚಾರವನ್ನು ಆರಂಭಿಸಲಾಗುವುದು ಎಂದು ಘೋಷಿಸಿದೆ.

ಜೆಡ್ ಏರ್‌ವೇಸ್ ಹಾಗೂ ಕೇರಳ ಪ್ರವಾಸೋದ್ಯಮ ಎರಡು ಪ್ರಮುಖ ಬ್ರ್ಯಾಂಡ್‌ಗಳಾಗಿವೆ, ಅಲ್ಲದೇ ದೇವರ ನಾಡು ಎಂದೇ ಖ್ಯಾತಿ ಹೊಂದಿರುವ ಕೇರಳ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ದಿಗೊಳಿಸಲು ಇದು ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಜೆಟ್ ಹೇಳಿದೆ.

ನೈಜ ಪ್ರಕೃತಿ ಸೌಂದರ್ಯದ ಮತ್ತು ಸಾಂಸ್ಕೃತಿಕ ನೆಲೆಬೀಡಾದ ಕೇರಳದಲ್ಲಿ ಕೋವಲಂ ಬೀಚ್, ಬ್ಲೂ ಲಾಗೂನ್ಸ್ , ಮನ್ನಾರ್ ಹಿಲ್ ಸ್ಟೇಶನ್, ಕೊಲ್ಲಂ ಬ್ಯಾಕ್ ವಾಟರ್, ಅಸಾಪ್ಪುಜ್, ವಯನಾಡ್, ಪರ್ವತ, ಗಿರಿ ಸೇರಿದಂತೆ ಹಲವಾರು ಪ್ರಕೃತಿಯ ರಮಣೀಯ ಸ್ಥಳಗಳು ಇಲ್ಲಿವೆ.

ಕೇರಳದ ಪ್ರಮುಖ ಮೂರು ನಗರಗಳಾದ ತಿರುವನಂತಪುರಂ, ಕೊಚಿ ಹಾಗೂ ಕೊಝಿಕೋಡ್‌ ಕೇಂದ್ರಗಳಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಸಂಪರ್ಕ ವಲಯವನ್ನಾಗಿ ಮಾಡಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತ: ಐಐಪಿ
ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಇಳಿಮುಖ
ಸತ್ಯಂ: 4 ಉನ್ನತ ಅಧಿಕಾರಿಗಳು ಕಂಪೆನಿಗೆ ಗುಡ್‌ ಬೈ
ಕಬ್ಬು ಉತ್ಪಾದನೆ ಶೇ.17ರಷ್ಟು ಕುಸಿತ
ಕೈಗಾರಿಕಾ, ಗಣಿಗಾರಿಕೆ ಬೆಳವಣಿಗೆ ಕುಂಠಿತ
4 ವಿಶೇಷ ಲೆಕ್ಕಪರಿಶೋಧಕರ ನೇಮಕ: ಟೆಲಿಕಾಂ