ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಡುಗೆ ಅನಿಲ ಉತ್ಪಾದನೆ ಮೇಲೆ ತೆರಿಗೆ: ಪಾಂಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಡುಗೆ ಅನಿಲ ಉತ್ಪಾದನೆ ಮೇಲೆ ತೆರಿಗೆ: ಪಾಂಡೆ
ಅನಿಲ ಪೈಪ್‌ಲೈನ್ ಕಾಮಗಾರಿಯ ಹಿನ್ನೆಲೆಯಲ್ಲಿ ದೇಶಿಯವಾಗಿ ಉತ್ಪಾದಿಸುತ್ತಿರುವ ಅಡುಗೆ ಅನಿಲದ ಮೇಲೆ ಬಂಡವಾಳ ತೆರಿಗೆಯನ್ನು ಹೇರಲು ಸರ್ಕಾರ ನಿರ್ಧರಿಸಿರುವುದಾಗಿ ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್.ಪಾಂಡೆ ಬುಧವಾರ ತಿಳಿಸಿದ್ದಾರೆ.

ಸುಮಾರು 500-600ಕಿ.ಮೀ.ನೈಸರ್ಗಿಕ ಅನಿಲ ಪೈಪ್ ಲೈನ್ ಕಾಮಗಾರಿಯನ್ನು ಪ್ರಸಕ್ತ ಸಾಲಿನಲ್ಲಿಯೇ ಪೂರ್ಣಗೊಳಿಸುವ ಗುರಿಯನ್ನು ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಾಕಷ್ಟು ಆರ್ಥಿಕ ಅವಶ್ಯತೆ ಇರುವ ಕಾರಣ ಅಡುಗೆ ಅನಿಲ ಉತ್ಪಾದನೆ ಮೇಲೆ ಸೆಸ್ ಹೇರಲು ನಿರ್ಧರಿಸಿರುವುದಾಗಿ ಹೇಳಿದರು.

ಈ ರೀತಿಯಾಗಿ ತೆರಿಗೆ ಹೇರುವುದರಿಂದ ವಾರ್ಷಿಕವಾಗಿ ಸುಮಾರು 3ಸಾವಿರ ಕೋಟಿ ರೂ.ಆದಾಯ ಪಡೆಯಬಹುದಾಗಿದೆ ಎಂದು ಇಂಧನ ಫೋರಂ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದರು.

ಪ್ರಸಕ್ತವಾಗಿ ಭಾರತ ಪ್ರತಿದಿನ 100ಮಿಲಿಯನ್ ಕ್ಯೂಬಿಕ್ ಅನಿಲವನ್ನು ಉತ್ಪಾದಿಸುತ್ತದೆ, ಅದರಲ್ಲೂ 25ಎಂಎಂಎಸ್‌ಎಂಡಿ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಪಡೆಯಲಾಗುತ್ತದೆ. ಆ ಕಾರಣಕ್ಕಾಗಿ ಹೆಚ್ಚಿನ ಅನಿಲಕ್ಕಾಗಿ ಪೈಪ್ ಲೈನ್ ಯೋಜನೆ ಅಗತ್ಯವಾಗಿದೆ ಎಂದು ವಿವರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಎನ್‌ಜಿ ಸಂಸ್ಥೆಗೆ ಶೇ.24ರಷ್ಟು ಲಾಭ
ಪ್ರಕೃತಿ ಸೌಂದರ್ಯ ವೀಕ್ಷಣೆಗಾಗಿ 'ಜೆಟ್‌2 ಕೇರಳ' ಆರಂಭ
ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತ: ಐಐಪಿ
ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಇಳಿಮುಖ
ಸತ್ಯಂ: 4 ಉನ್ನತ ಅಧಿಕಾರಿಗಳು ಕಂಪೆನಿಗೆ ಗುಡ್‌ ಬೈ
ಕಬ್ಬು ಉತ್ಪಾದನೆ ಶೇ.17ರಷ್ಟು ಕುಸಿತ