ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್-ಪ್ರವಾಸೋದ್ಯಮ ಚೇತರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್-ಪ್ರವಾಸೋದ್ಯಮ ಚೇತರಿಕೆ
ಮುಂದಿನ ವರ್ಷ ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನಡೆಯಲಿದ್ದು, ಇದರಿಂದಾಗಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೇತರಿಕೆ ಕಾಣಲಿದೆ ಎಂದು ಡೆಲೊಯ್‌ಟ್ಟೆ ಅಭಿಪ್ರಾಯ ವ್ಯಕ್ತಪಡಿಸಿದೆ.

2010ರಲ್ಲಿ ಭಾರತ ಪ್ರಥಮ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್ ನಡೆಸುತ್ತಿದೆ. ಆ ಕಾರಣಕ್ಕಾಗಿ 2006ರಲ್ಲಿ ಮೆಲ್ಬೋರ್ನ್‌ನಲ್ಲಿ ಗೇಮ್ಸ್ ನಡೆದಾಗ ಹೋಟೆಲ್‌‌ಗಳಿಗೆ ಬಂಪರ್ ವ್ಯವಹಾರ ಕುದುರಿದಂತೆ ಭಾರತದಲ್ಲಿಯೂ ಅದೇ ವ್ಯವಹಾರ ಕುದುರಲಿದೆ ಎಂಬ ನಂಬಿಕೆ ಭಾರತದ ಹೋಟೆಲ್ ಮಾಲಿಕರದ್ದು ಎಂದು ವರದಿ ತಿಳಿಸಿದೆ.

ಕಾಮನ್ ವೆಲ್ತ್ ಗೇಮ್ಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಹೋಟೆಲುಗಳು ಪ್ರವಾಸಿಗರಿಗೆ ಉತ್ತಮವಾದ ರೂಂ, ಸೌಲಭ್ಯ ನೀಡುವತ್ತ ಹೆಚ್ಚಿನ ಗಮನಹರಿಸಿವೆ. ಮುಂಬೈ ಮತ್ತು ದೆಹಲಿ ಬಗ್ಗೆ ಹೆಚ್ಚಿನ ಕಾಳಜಿವಹಿಸಿರುವುದಾಗಿ ಡೆಲೊಯ್‌ಟ್ಟೆ ಹೇಳಿದೆ.

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿ ಹಾಗೂ ಜಾಗತಿಕ ಹಿಂಜರಿತ ಇದ್ದರೂ ಕೂಡ ಭಾರತ ಪ್ರವಾಸೋದ್ಯಮದಲ್ಲಿ ಜಾಗತಿಕವಾಗಿ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದು ವಿವರಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸತ್ಯಂ' ರಾಜು ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ
ಅಡುಗೆ ಅನಿಲ ಉತ್ಪಾದನೆ ಮೇಲೆ ತೆರಿಗೆ: ಪಾಂಡೆ
ಐಎನ್‌ಜಿ ಸಂಸ್ಥೆಗೆ ಶೇ.24ರಷ್ಟು ಲಾಭ
ಪ್ರಕೃತಿ ಸೌಂದರ್ಯ ವೀಕ್ಷಣೆಗಾಗಿ 'ಜೆಟ್‌2 ಕೇರಳ' ಆರಂಭ
ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತ: ಐಐಪಿ
ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಇಳಿಮುಖ