ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚುನಾವಣಾ ಬಿಸಿ-ವಿಮಾನಯಾನ ವಹಿವಾಟು ಚೇತರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಬಿಸಿ-ವಿಮಾನಯಾನ ವಹಿವಾಟು ಚೇತರಿಕೆ
ಲೋಕಸಭಾ ಚುನಾವಣೆಯಿಂದಾಗಿ ದೇಶೀಯ ವಿಮಾನಯಾನ ವಹಿವಾಟಿಗೆ ತಕ್ಕಮಟ್ಟಿನ ಚೇತರಿಕೆ ಕಾಣುವಲ್ಲಿ ಸಹಕಾರಿಯಾಗಿರುವುದಕ್ಕೆ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಅಭಿನಂದನೆ ಸಲ್ಲಿಸಿದೆ. ಮಾರ್ಚ್ ತಿಂಗಳಲ್ಲಿ 32.21ಲಕ್ಷ ಪ್ರಯಾಣಿಕರು ಸಂಚರಿಸಿದ್ದರೆ, ಏಪ್ರಿಲ್‌ನಲ್ಲಿ 33.6ಲಕ್ಷ ಮಂದಿ ಪ್ರಯಾಣಿಸಿದ್ದರು.

ಆದರೆ ಕಳೆದ ವರ್ಷದ ಅಂಕಿ-ಅಂಶಕ್ಕೆ ಹೋಲಿಸಿದಲ್ಲಿ ಈ ಬಾರಿ ವಿಮಾನಯಾನದಲ್ಲಿ ಪ್ರಯಾಣಿಸಿದವರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. ಕಳೆದ ಏಪ್ರಿಲ್‌ನಲ್ಲಿ 37.78ಲಕ್ಷ ಜನ ವಿಮಾನದಲ್ಲಿ ಪ್ರಯಾಣಿಸಿದ್ದರು.

ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆಯ ಪರಿಣಾಮವಾಗಿ ರಾಜಕಾರಣಿಗಳ, ಪುಡಾರಿಗಳ ಓಡಾಟದಿಂದಾಗಿ ವಿಮಾನಯಾನದಲ್ಲಿ ಕೊಂಚ ಚೇತರಿಕೆ ಕಂಡಿರುವುದಾಗಿ ಹೇಳಿದೆ.

ಇದರಲ್ಲಿ ಕಡಿಮೆ ಪ್ರಯಾಣದರ ಹೊಂದಿರುವ ಇಂಡಿಗೋ, ಸ್ಪೈಸ್ ಜೆಟ್ ಮತ್ತು ಜೆಟ್‌ಲೈಟ್‌ಗಳಲ್ಲಿ ಶೇ.70ರಷ್ಟು ಪ್ರಯಾಣಿಕರಿಂದ ತುಂಬಿರುತ್ತಿತ್ತು. ಮದ್ಯದ ದೊರೆ ವಿಜಯ್ ಮಲ್ಯ ಅವರ ಕಿಂಗ್‌ಫಿಶರ್ ಕೂಡ ವಹಿವಾಟಿನಲ್ಲಿ ಶೇ.26ರಷ್ಟು ಚೇತರಿಕೆ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಟ್‌ಏರ್‌ವೇಸ್‌ನ 120 ವಿದೇಶಿ ಗಗನಸಖಿಯರಿಗೆ ಕೊಕ್
ಚಿನ್ನ, ಬೆಳ್ಳಿ ದರ ಏರಿಕೆ
ಅಕ್ಕಿ ದಾಸ್ತಾನು ಶೇ.19ರಷ್ಟು ಏರಿಕೆ
ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್-ಪ್ರವಾಸೋದ್ಯಮ ಚೇತರಿಕೆ
'ಸತ್ಯಂ' ರಾಜು ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ
ಅಡುಗೆ ಅನಿಲ ಉತ್ಪಾದನೆ ಮೇಲೆ ತೆರಿಗೆ: ಪಾಂಡೆ