ಅಗತ್ಯ ಅಹಾರ ಧಾನ್ಯ ವಸ್ತುಗಳ ದರ ಏರಿಕೆಯ ಮಧ್ಯೆ ಹಣದುಬ್ಬರ ದರ ಮೇ 2ಕ್ಕೆ ವಾರಾಂತ್ಯಗೊಂಡಂತೆ ಶೇ.0.48ಕ್ಕೆ ಕುಸಿತ ಕಂಡಿದೆ. ಕಳೆದ ವಾರ ಏಪ್ರಿಲ್ 25ಕ್ಕೆ ವಾರಂತ್ಯಗೊಂಡಂತೆ ಶೇ.0.57 ರಿಂದ ಶೇ.0.70ಕ್ಕೆಏರಿಕೆಯಾಗಿತ್ತು.
ಸಕ್ಕರೆ, ಹಾಲು, ತರಕಾರಿ, ದ್ವಿದಳ ಧಾನ್ಯಗಳು ಅಹಾರ ವಸ್ತುಗಳ ದರಗಳು ನಿರಂತರ ಏರಿಕೆ ಕಾಣುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.
ಸಗಟು ಸೂಚ್ಯಂಕ ದರ ಕಳೆದ ವರ್ಷದ ಮೇ ವಾರಾಂತ್ಯಕ್ಕೆ ಶೇ.8.73ಕ್ಕೆ ತಲುಪಿತ್ತು. ಪ್ರಸಕ್ತ ತಿಂಗಳಲ್ಲಿ ಹಣದುಬ್ಬರ ದರ ನಿರಂತರ ಮೂರು ವಾರಗಳಲ್ಲಿ ಏರಿಕೆ ಕಂಡಿದೆ. ಕಳೆದ ಎಂಟು ವಾರಗಳಿಂದ ಹಣದುಬ್ಬರ ದರ ಏರಿಳಿಕೆ ಕಾಣುತ್ತಿದೆ.
ಪ್ರಸಕ್ತ ವಾರದಲ್ಲಿ ಟೀ ಶೇ.7 ರಷ್ಟು ಬಾಜ್ರಾ ಶೇ.3ರಷ್ಟು, ಹಾಲು, ಗೋಧಿ ಮತ್ತು ಮಸಾಲೆ ಪದಾರ್ಥಗಳ ಬೆಲೆಗಳಲ್ಲಿ ಏರಿಕೆ ಕಂಡಿವೆ. ಇಂಧನ,ವಿದ್ಯುತ್ ಮತ್ತು ಲ್ಯೂಬ್ರಿಕೆಂಟ್ಸ್ಗಳ ಸಗಟು ಸೂಚ್ಯಂಕ ದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಜಾಗತಿಕ ಮಟ್ಟದಲ್ಲಿ ದಿನಸಿ ವಸ್ತುಗಳ ದರಗಳು ಇಳಿಮುಖವಾದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಸೂಚ್ಯಂಕ ದರ ಕುಸಿತ ಕಂಡಿದೆ. |