ಭಾರತ ಸಂಚಾರ ನಿಗಮವು ಸಾರ್ವಜನಿಕ ದೂರವಾಣಿ (ಪಲ್ಸ್ )ಗಳ ಪಲ್ಸ್ ದರಗಳನ್ನು ಕಡಿತಗೊಳಿಸಿದೆ. ನೂತನ ಪಲ್ಸ್ ದರ, ಸ್ಥಳೀಯ ಕರೆಗಳು ಮತ್ತು ಎಲ್ಲಾ ನೆಟ್ವರ್ಕ್ಗಳ 50 ಕಿ.ಮೀ. ವ್ಯಾಪ್ತಿಯ ಕರೆಗಳಿಗೆ 90 ಸೆಕೆಂಡ್ಗಳು, ಎಲ್ಲಾ ನೆಟ್ವರ್ಕ್ಗಳ ಮೊಬೈಲ್ ಫೋನ್ಗಳ ಕರೆಗಳು 60 ಸೆಕೆಂಡ್ಗಳು.
ದೂರವಾಣಿ ಸಂಪರ್ಕದಲ್ಲಿ ಕ್ರಾಂತಿ ಮಾಡಿರುವ ಬಿಎಸ್ಎನ್ಎಲ್ ಇದೀಗ ದೂರವಾಣಿ ಮತ್ತು ಮೊಬೈಲ್ ಕರೆಗಳ ಪಲ್ಸ್ ದರ ಕಡಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಿದೆ ಎಂದು ತಿಳಿಸಿದೆ.
ಯಾವುದೇ ನೆಟ್ವರ್ಕ್ ಮತ್ತು ಭಾರತದ ಯಾವುದೇ ಭಾಗದ 50 ಕಿ.ಮೀ. ಮೀರಿದ ಕರೆಗಳಿಗೆ 60 ಸೆಕೆಂಡ್ಸ್ಗಳಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬಿಎಸ್ಎನ್ಎಲ್ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಸ್ಪರ್ಧಾತ್ಮಕವಾಗಿ ಮುಂದುವರಿಯುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಬಿಎಸ್ಎನ್ಎಲ್ ಮತ್ತಷ್ಟು ಗ್ರಾಹಕರಿಗೆ ಅನುಕೂಲವಾಗುವ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ. |