ವಾಣಿಜ್ಯ ನಗರಿಯ ಚಿನಿವಾರ ಪೇಟೆಯಲ್ಲಿನ ವಹಿವಾಟು ಏರಿಳಿತಗಳ ನಡುವೆಯೂ ಬಂಗಾರದ ಬೆಲೆ ಗುರುವಾರವೂ ಕೂಡ ಚೇತರಿಕೆಯೊಂದಿಗೆ ಹೆಚ್ಚಳ ಕಂಡಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ 85ರೂ.ನಷ್ಟು ಹೆಚ್ಚಳದೊಂದಿಗೆ 10ಗ್ರಾಂ ಬಂಗಾರದ ಬೆಲೆ 14,890ರೂ.ಗೆ ಏರಿಕೆ ಕಂಡಿದೆ. ಬುಧವಾರವಷ್ಟೇ 10ಗ್ರಾಂ ಚಿನ್ನಕ್ಕೆ 14,805ರೂ.ಆಗಿತ್ತು.
ಅಪರಂಜಿ ಚಿನ್ನದ ದರ ಕೂಡ 10ಗ್ರಾಂಗೆ 14, 875ರೂ.ನಿಂದ 14,960ರೂ.ಗಳಷ್ಟು ಏರಿಕೆ ಕಂಡಿದೆ. ಆದರೆ ಬೆಳ್ಳಿ ದರ ಮಾತ್ರ ಮಾರುಕಟ್ಟೆಯಲ್ಲಿ ಇಳಿಮುಖವಾಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಬೆಳಿಗ್ಗಿನ ವಹಿವಾಟಿನಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಆದರೆ ಬುಧವಾರದ ಮಾರುಕಟ್ಟೆಯಲ್ಲಿ ಅಲ್ಪ ಚೇತರಿಕೆ ಕಂಡಿತ್ತು. |