ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಹೊಡೆತ: ಸಾವಿರ ನೌಕರರ ವಜಾ-ಮಿತ್ತಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಹೊಡೆತ: ಸಾವಿರ ನೌಕರರ ವಜಾ-ಮಿತ್ತಲ್
ಜಾಗತಿಕ ಆರ್ಥಿಕ ಹಿಂಜರಿತದ ಆತಂಕ ಸ್ಥಿತಿ ಇನ್ನೂ ಮುಂದುವರಿದಿದ್ದು, ಆ ನಿಟ್ಟಿನಲ್ಲಿ ಜಗತ್ತಿನ ಬೃಹತ್ ಉಕ್ಕು ಉತ್ಪಾದಕ ಕಂಪೆನಿ ದೊರೆ ಅರ್ಸೆಲೊ ಮಿತ್ತಲ್, ಅಮೆರಿಕದ ಕಂಪೆನಿಯಿಂದ ಸಾವಿರ ನೌಕರರನ್ನು ವಜಾಗೊಳಿಸುವ ಸಾಧ್ಯತೆ ಇರುವುದಾಗಿ ಘೋಷಿಸಿದ್ದಾರೆ.

ಬುಧವಾರವಷ್ಟೇ ಮಿತ್ತಲ್ ಅವರು ತಮ್ಮ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ, ನೌಕರರ ವಜಾ ಕುರಿತಂತೆ ಆಕ್ರೋಶಗೊಂಡು, ದಾಳಿ ನಡೆಸಿದ ಪ್ರಕರಣ ನಡೆದಿತ್ತು. ಅದರ ಬೆನ್ನಲ್ಲೇ ಮಿತ್ತಲ್ ಇದೀಗ ನೌಕರರ ವಜಾ ನಿರ್ಧಾರವನ್ನು ಗುರುವಾರ ಬಹಿರಂಗಗೊಳಿಸಿದ್ದಾರೆ.

ಇಂಡಿಯಾನಾ ಹಾರ್ಬರ್ ವೆಸ್ಟ್ ಮಿಲ್‌ ಪ್ಲ್ಯಾಂಟ್‌ನಿಂದ ಜುಲೈ ವೇಳೆಗೆ ಸುಮಾರು 978ನೌಕರರನ್ನು ಹುದ್ದೆಯಿಂದ ತೆಗೆಯುವ ಸಾಧ್ಯತೆ ಇರುವುದಾಗಿ ಹೇಳಿದರು.

ಜಾಗತಿಕ ಆರ್ಥಿಕ ಹೊಡೆತವನ್ನು ಎದುರಿಸುವ ನಿಟ್ಟಿನಲ್ಲಿ ಜಾಗತಿಕ ಉಕ್ಕು ಉತ್ಪಾದನೆಯಲ್ಲಿ ಶೇ.45ರಷ್ಟು ಕಡಿತಗೊಳಿಸುತ್ತಿರುವುದಾಗಿ ಏಪ್ರಿಲ್ ತಿಂಗಳಿನಲ್ಲಿ ಮಿತ್ತಲ್ ಘೋಷಿಸಿದ್ದರು.

ಇದೊಂದು ತುಂಬಾ ಕಠಿಣವಾದ ನಿರ್ಧಾರವಾಗಿದೆ. ಆದರೆ ಜಾಗತಿಕ ಆರ್ಥಿಕ ಹಿಂಜರಿತ ಬಿಸಿಯನ್ನು ಎದುರಿಸುವ ನಿಟ್ಟಿನಲ್ಲಿ ಕಂಪೆನಿ ಅನಿವಾರ್ಯವಾಗಿ ಈ ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ಮಿತ್ತಲ್ ಸ್ಪಷ್ಟನೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
10ಗ್ರಾಂ ಬಂಗಾರದ ಬೆಲೆ 14,890ರೂ.
ಬಿಎಸ್‌ಎನ್‌ಎಲ್ ಪಲ್ಸ್ ದರ ಕಡಿತ
ಹಣದುಬ್ಬರ ಶೇ.0.48ಕ್ಕೆ ಕುಸಿತ
ಚುನಾವಣಾ ಬಿಸಿ-ವಿಮಾನಯಾನ ವಹಿವಾಟು ಚೇತರಿಕೆ
ಜೆಟ್‌ಏರ್‌ವೇಸ್‌ನ 120 ವಿದೇಶಿ ಗಗನಸಖಿಯರಿಗೆ ಕೊಕ್
ಚಿನ್ನ, ಬೆಳ್ಳಿ ದರ ಏರಿಕೆ