ಟಾಟಾ ಒಡೆತನ ಹೊಂದಿರುವ ಜಾಗ್ವರ್ ಹಾಗೂ ಲ್ಯಾಂಡ್ ರೋವರ್(ಜೆಎಲ್ಆರ್) ಕಂಪೆನಿಗೆ ಸುಲಭ ರೀತಿಯಲ್ಲಿ ಸಹಕಾರ ನೀಡಲು ಸಾಧ್ಯವಿಲ್ಲ ಎಂಬ ಸೂಚನೆ ನೀಡಿರುವ ಬ್ರಿಟನ್ ಸರ್ಕಾರ, ತೆರಿಗೆದಾರರ ಹಿತದೃಷ್ಟಿಯಿಂದಾಗಿ ಷರತ್ತುಬದ್ಧ ಸಹಾಯಕ್ಕೆ ಸಿದ್ಧವಿರುವುದಾಗಿ ಹೇಳಿದೆ.
ಜೆಎಲ್ಆರ್ಗೆ ನೆರವು ನೀಡಲು ನಾವು ಸಿದ್ದರಾಗುತ್ತಿದ್ದೇವೆ, ಆದರೆ ಯಾವುದೇ ಒಪ್ಪಂದದೊಂದಿಗೆ ಅಲ್ಲ. ಕೇವಲ ಷರತ್ತುಬದ್ಧ ನೆರವು ಮಾತ್ರ ನೀಡಲು ಸಿದ್ದ ಎಂದು ಯುನೈಟೆಡ್ ಕಿಂಗ್ಡಂನ ವಾಣಿಜ್ಯ ವಿಭಾಗದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಎಂಟರ್ಪ್ರೈಸ್ ಎಂಡ್ ರೆಗ್ಯುಲೇಟರಿ ರಿಫೋರಂ(ಬಿಇಆರ್ಆರ್) ಮಾತುಕತೆ ನಡೆಸುತ್ತಿರುವುದಾಗಿ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದೆ.
ಅಲ್ಲದೇ ಈ ಕುರಿತು ಬಿಇಆರ್ಆರ್ ಜತೆ ಚರ್ಚೆ ನಡೆಸುತ್ತಿದ್ದು, ಮಾತುಕತೆ ಪ್ರಗತಿಯಲ್ಲಿದೆ ಎಂದು ಟಾಟಾ ಮೋಟಾರ್ಸ್ ವಕ್ತಾರರು ಸ್ಪಷ್ಟಪಡಿಸಿದ್ದು, ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಶೀಘ್ರವೇ ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. |