ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಪ್ರೋಗೆ 34ದ.ಲ.ಡಾಲರ್ ನೂತನ ಗುತ್ತಿಗೆ: ಸುನೊಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಪ್ರೋಗೆ 34ದ.ಲ.ಡಾಲರ್ ನೂತನ ಗುತ್ತಿಗೆ: ಸುನೊಕೋ
ದೇಶದ ಪ್ರತಿಷ್ಠಿತ ಸಾಫ್ಟ್‌‌ವೇರ್ ರಫ್ತು ಸಂಸ್ಥೆಯಾದ ವಿಪ್ರೊದ ಅಂಗಸಂಸ್ಥೆ ಇನ್ಫೋಕ್ರಾಸಿಂಗ್‌ಗೆ ಅಮೆರಿಕದ ಸುನೊಕೋ ಕಂಪನಿಯಿಂದ 34 ದಶಲಕ್ಷ ಡಾಲರ್ ಮೊತ್ತದ ಗುತ್ತಿಗೆ ಪಡೆದಿರುವುದಾಗಿ ತಿಳಿಸಿದೆ. ದೇಶದ ಸಾಫ್ಟ್ ವೇರ್ ದಿಗ್ಗಜ ಟಿಸಿಎಸ್‌‌ಯು ವೊಕ್ಸ್ ವ್ಯಾಗನ್ ಕಂಪನಿಯ ಲಂಡನ್ ಘಟಕದಿಂದ 5 ವರ್ಷಗಳ ಐಟಿ ಗುತ್ತಿಗೆ ಪಡೆದುಕೊಂಡಿದೆ.

ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳ ಮಾರಾಟ ಸಂಸ್ಥೆ ಸುನೊಕೋ ನೀಡಿರುವ ಈ ಗುತ್ತಿಗೆ ನಾಲ್ಕು ವರ್ಷ ಅವಧಿಯದ್ದಾಗಿದೆ. ಈ ಗುತ್ತಿಗೆ ಮೂಲಕ ಸನೊಕೋ ಇನ್ಫೋ ಕ್ರಾಸಿಂಗ್ ಜೊತೆಗಿನ 13 ವರ್ಷಗಳ ಬಾಂಧವ್ಯವನ್ನು ಮುಂದುವರಿಸಿದೆ.
ಟಿಸಿಎಸ್ ಗೆ ವೋಕ್ಸ್ ವ್ಯಾಗನ್ ಬಿಪಿಒ

ಅದೇ ರೀತಿ ಮತ್ತೊಂದು ಹೆಸರಾಂತ ಸಾಫ್ಟ್‌‌ವೇರ್ ಕಂಪೆನಿಯಾದ ಟಿಸಿಎಸ್‌‌ಯು ವೊಕ್ಸ್ ವ್ಯಾಗನ್ ಕಂಪನಿಯ ಲಂಡನ್ ಘಟಕದ ಐಟಿ ಗುತ್ತಿಗೆ ಪಡೆದಿದೆ. ಇದು 5 ವರ್ಷದ ಗುತ್ತಿಯಾಗಿದ್ದು, ಟಿಸಿಎಸ್ ಕಾರುಗಳ ಉತ್ಪಾದನೆ ಕುರಿತು ಐಟಿ ಟ್ರಾನ್ಸ್ ಪಾರ್ಮೇಶನ್ ಮತ್ತು ಬೆಂಬಲ ಸೇವೆಯನ್ನು ಒದಗಿಸಲಿದೆ.

ಗುತ್ತಿಗೆ ಮೊತ್ತದ ಬಗ್ಗೆ ಕಂಪನಿ ವಿವರ ಬಹಿರಂಗಪಡಿಸಿಲ್ಲ. ಒಪ್ಪಂದ ಪ್ರಕಾರ ಲಂಡನ್ ನಲ್ಲಿರುವ ವೋಕ್ಸ್ ವ್ಯಾಗನ್ ಬ್ರ್ಯಾಂಡ್ ಗಳಾದ ಆಡಿ, ಸಿಯೆಟ್, ಸ್ಕೋಡಾ, ವೋಕ್ಸ್ ವ್ಯಾಗನ್ ಪ್ಯಾಸೆಂಜರ್ ಕಾರ್ ಹಾಗೂ ವಾಣಿಜ್ಯ ವಾಹನಗಳಿಗೆ ಸ್ಥಳೀಯ ಮತ್ತು ಸಾಗರೋತ್ತರ ಐಟಿ ಸೇವೆಯನ್ನು ಒದಗಿಸುವ ಸಲುವಾಗಿ ವಿತರಣಾ ಜಾಲವನ್ನು ಬಳಿಸಿಕೊಳ್ಳಲಿದೆ ಎಂದು ಟಿಸಿಎಸ್ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ ಜೆಎಲ್‌ಆರ್‌‌ಗೆ ಷರತ್ತುಬದ್ಧ ನೆರವು: ಬ್ರಿಟನ್
ಗಗನಕ್ಕೇರಲಿರುವ ಚಾಹಾ ಪುಡಿ ಬೆಲೆ
ಸ್ಯಾಮ್‌ಸಾಂಗ್ 'ಎನ್' ಆಂಡ್ 'ಆರ್' ನೋಟ್‌ಬುಕ್
ಭಾರತ ಶೀಘ್ರವೇ ಆರ್ಥಿಕ ಚೇತರಿಕೆ ಕಾಣಲಿದೆ: ಡಿ.ಸುಬ್ಬರಾವ್
ಕರ್ನಾಟಕ ಆರ್ಥಿಕ ಸ್ಥಿತಿಗೆ ಆರ್‌ಬಿಐ ಪ್ರಶಂಸೆ: ಸಿಎಂ
ಆರ್ಥಿಕ ಹೊಡೆತ: ಸಾವಿರ ನೌಕರರ ವಜಾ-ಮಿತ್ತಲ್