ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ ಶುಕ್ರವಾರದಂದು ನೂತನ ಸಣ್ಣ ಕಾರು 'ರಿಟ್ಜ್ ' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇಂದು ಮಾರುಕಟ್ಟೆಗೆ ನೂತನವಾಗಿ ಬಿಡುಗಡೆ ಮಾಡಿರುವ ರಿಟ್ಜ್ ಪೆಟ್ರೋಲ್ ಹಾಗೂ ಡಿಸೇಲ್ ಎರಡು ಮಾದರಿಗಳಲ್ಲಿ ಲಭ್ಯ. ಆರಂಭಿಕವಾಗಿ 3.90-4.99ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.
ರಿಟ್ಜ್ ನಮ್ಮ ಸಂಸ್ಥೆಯ ಜಾಗತಿಕ ಐದನೇ ಮಾದರಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅಲ್ಲದೇ ಭಾರತದ ಮೊದಲ ಪರಿಸರಸ್ನೇಹಿ ಕಾರು ಇದಾಗಿದೆ ಎಂದರು.
ನಾವು ಮೊದಲ ಬಾರಿಗೆ ಮಾರುಕಟ್ಟೆಗೆ ನೂತನ ಮಾದರಿಯ ಸಣ್ಣ ಕಾರನ್ನು ಪರಿಚಯಿಸುತ್ತಿದ್ದು, ಇದು ಉತ್ತಮ ಮಾರುಕಟ್ಟೆ ಪಡೆಯಲಿದೆ ಎಂಬ ವಿಶ್ವಾಸ ಇರುವುದಾಗಿ ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಓ ಶಿನ್ಜೋ ನಾಕಾನಿಶಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಈ ಸಣ್ಣ ಮಾದರಿಯ ಕಾರನ್ನು ಸಾಕಷ್ಟು ಉತ್ತಮ ರೀತಿಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಯಾರಿಸಲಾಗಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡಿಮೆ ದರವನ್ನು ನಿಗದಿಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. |