ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಿಲಯನ್ಸ್ ಜೀವ ವಿಮಾದ ಸಿಇಓ ನಂದಾಗೋಪಾಲ್ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್ ಜೀವ ವಿಮಾದ ಸಿಇಓ ನಂದಾಗೋಪಾಲ್ ರಾಜೀನಾಮೆ
ರಿಲಯನ್ಸ್ ಜೀವ ವಿಮಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ನಂದಾಗೋಪಾಲ್ ಅವರು ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅವರು ಹೊಸ ಕಂಪೆನಿಗೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.

ನನ್ನ ಹುದ್ದೆಗೆ ರಾಜೀನಾಮೆ ನೀಡಿದ ಪತ್ರವನ್ನು ವರಿಷ್ಠರಿಗೆ ನೀಡಿರುವುದಾಗಿ ಹೇಳಿದ ಅವರು, ತಾನು ಸೇರುವ ನೂತನ ಕೆಲಸದ ಬಗ್ಗೆ ಏನನ್ನು ಹೇಳಲಾರೆ ಎಂದು ಅವರು ತಿಳಿಸಿದ್ದಾರೆ.

ರಿಲಯನ್ಸ್ ಜೀವ ವಿಮಾ ನಿಗಮಕ್ಕೆ ಸೇರ್ಪಡೆಗೊಂಡಿದ್ದ ನಂದಾಗೋಪಾಲ್, ತದನಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೇ ಬಿರ್ಲಾ ಸನ್ ಲೈಫ್‌ನ ಹಿರಿಯ ಉಪಾಧ್ಯಕ್ಷರೂ ಆಗಿದ್ದರು.

ಜೀವ ವಿಮಾ ವಲಯದಲ್ಲಿ ರಿಲಯನ್ಸ್ ದೇಶದ ನಾಲ್ಕನೇ ಬೃಹತ್ ಖಾಸಗಿ ಸಂಸ್ಥೆಯಾಗಿದ್ದು, 2008-09ರ ಮೊದಲ ಪ್ರೀಮಿಯಂ ಸಂಗ್ರಹದಲ್ಲಿ ಶೇ.28ರಷ್ಟು ಗ್ರೊಥ್ ಪಡೆದಿತ್ತು. ಅಲ್ಲದೇ ಕಳೆದ ವರ್ಷ 2,753 ಕೋಟಿ ರೂಪಾಯಿ ಸಂಗ್ರಹವಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 3,514ಕೋಟಿ ರೂ.ಸಂಗ್ರಹವಾಗಿದೆ.

ಇದೀಗ ನಂದಾಗೋಪಾಲ್ ಅವರ ರಾಜೀನಾಮೆಯಿಂದ ತೆರವುಗೊಂಡ ಹುದ್ದೆಗೆ, ರಿಲಯನ್ಸ್ ಜೀವವಿಮಾ ವಿಭಾಗದ ಸಹಾಯಕ ಸಿಇಓ ಮಲ್ಯ ಘೋಷ್ ಅವರನ್ನು ನೇಮಕ ಮಾಡಲಾಗುವುದು ಎಂದು ರಿಲಯನ್ಸ್ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು: ವೋಲ್ವೊ ಬಸ್ ಪ್ರಯಾಣ ದರ ಕಡಿತ
ಮಾರುತಿ ಸುಜುಕಿಯ ಸಣ್ಣ ಕಾರು 'ರಿಟ್ಜ್' ಮಾರುಕಟ್ಟೆಗೆ
ವಿಪ್ರೋಗೆ 34ದ.ಲ.ಡಾಲರ್ ನೂತನ ಗುತ್ತಿಗೆ: ಸುನೊಕೋ
ಟಾಟಾ ಜೆಎಲ್‌ಆರ್‌‌ಗೆ ಷರತ್ತುಬದ್ಧ ನೆರವು: ಬ್ರಿಟನ್
ಗಗನಕ್ಕೇರಲಿರುವ ಚಾಹಾ ಪುಡಿ ಬೆಲೆ
ಸ್ಯಾಮ್‌ಸಾಂಗ್ 'ಎನ್' ಆಂಡ್ 'ಆರ್' ನೋಟ್‌ಬುಕ್