ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಂಟಿಎನ್‌ಎಲ್‌ನಿಂದ 3ಜಿ ಮೊಬೈಲ್ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂಟಿಎನ್‌ಎಲ್‌ನಿಂದ 3ಜಿ ಮೊಬೈಲ್ ಬಿಡುಗಡೆ
ರಾಜ್ಯ ಸರ್ಕಾರ ಒಡೆತನದ ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್‌ಎಲ್) ಶುಕ್ರವಾರ 3ಜಿ(ಥರ್ಡ್ ಜನರೇಷನ್) ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮುಂದಿನ ಮಾರ್ಚ್‌ನೊಳಗೆ ನಗರದಲ್ಲಿ ಸುಮಾರು ಒಂದು ಲಕ್ಷ ಗ್ರಾಹಕರನ್ನು ಪಡೆಯುವ ನಿರೀಕ್ಷೆ ಹೊಂದಿರುವುದಾಗಿ ಹೇಳಿದೆ.

ವಾಣಿಜ್ಯ ನಗರಿಯಲ್ಲಿ 3ಜಿ ಬಿಡುಗಡೆಗಾಗಿ ಸುಮಾರು 250ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ. ಆ ನಿಟ್ಟಿನಲ್ಲಿ 2011ರ ಮಾರ್ಚ್‌ನೊಳಗೆ ಸುಮಾರು ಒಂದು ಲಕ್ಷ ಗ್ರಾಹಕರನ್ನು ಹೊಂದುವ ನಿರೀಕ್ಷೆ ಹೊಂದಲಾಗಿದೆ ಎಂದು ಎಂಟಿಎನ್‌ಎಲ್ ತಿಳಿಸಿದೆ.

ಒಂದು ತಿಂಗಳೊಳಗಾಗಿ 3ಜಿ ಸಂಪರ್ಕ ದೊರೆಯಲಿದೆ ಎಂದು ಎಂಟಿಎನ್‌ಎಲ್ ಚೇಯರ್‌ಮೆನ್ ಹಾಗೂ ಆಡಳಿತ ನಿರ್ದೇಶಕರಾಗಿರುವ ಆರ್‌ಎಸ್‌ಪಿ ಸಿನ್ನಾ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.

ಮುಂದಿನ ದಿನಗಳಲ್ಲಿ ಸುಮಾರು 7.5ಲಕ್ಷ ಗ್ರಾಹಕರಿಗೆ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದ ಸಿನ್ನಾ, ಆದರೆ ಬೇಕಾದ ಅನುಮತಿ ದೊರೆಯಬೇಕಾಗಿದೆ. ನಮಗೆ ಕೇವಲ ನಾಲ್ಕು ಗ್ರಾಹಕರನ್ನು ಹೊಂದುವ ಅನುಮತಿ ದೊರೆತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಿಲಯನ್ಸ್ ಜೀವ ವಿಮಾದ ಸಿಇಓ ನಂದಾಗೋಪಾಲ್ ರಾಜೀನಾಮೆ
ಬೆಂಗಳೂರು: ವೋಲ್ವೊ ಬಸ್ ಪ್ರಯಾಣ ದರ ಕಡಿತ
ಮಾರುತಿ ಸುಜುಕಿಯ ಸಣ್ಣ ಕಾರು 'ರಿಟ್ಜ್' ಮಾರುಕಟ್ಟೆಗೆ
ವಿಪ್ರೋಗೆ 34ದ.ಲ.ಡಾಲರ್ ನೂತನ ಗುತ್ತಿಗೆ: ಸುನೊಕೋ
ಟಾಟಾ ಜೆಎಲ್‌ಆರ್‌‌ಗೆ ಷರತ್ತುಬದ್ಧ ನೆರವು: ಬ್ರಿಟನ್
ಗಗನಕ್ಕೇರಲಿರುವ ಚಾಹಾ ಪುಡಿ ಬೆಲೆ