ವಿಮಾನ ಇಂಧನ (ಎಟಿಎಫ್) ದರ ಏರಿಕೆ ಮತ್ತೆ ಅಲ್ಪ ಪ್ರಮಾಣದ ಹೆಚ್ಚಳ ಕಂಡಿದ್ದು, ಆ ನಿಟ್ಟಿನಲ್ಲಿ ದೇಶೀಯ ತೈಲ ನಿಗಮ ಶುಕ್ರವಾರದಂದು ವಿಮಾನ ಇಂಧನ ದರದಲ್ಲಿ ಶೇ.1.8ರಷ್ಟು ಹೆಚ್ಚಳ ಮಾಡಿರುವುದಾಗಿ ಘೋಷಿಸಿದೆ.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ವಿಮಾನ ಇಂಧನ ದರವನ್ನು (ಎಟಿಎಫ್) ದೆಹಲಿಯಲ್ಲಿ ಕಿಲೋ ಲೀಟರ್ಗೆ ಮತ್ತೆ 585ರೂ.ಗಳಷ್ಟು ಹೆಚ್ಚಳ ಮಾಡಿದೆ. ಬೆಲೆ ಹೆಚ್ಚಳದೊಂದಿಗೆ ಲೀಟರ್ಗೆ ಇಂಧನ ಬೆಲೆ 32,199ರೂ. ಆಗಿದೆ. ಈ ಏರಿಕೆಯ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ ಎಂದು ಐಓಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ವಿಮಾನ ಇಂಧನ ಬೆಲೆಯಲ್ಲಿ ಶೇ.1ರಷ್ಟು ಕಡಿತ ಮಾಡಲಾಗಿತ್ತು. ಮೇ ತಿಂಗಳಲ್ಲಿ ದೆಹಲಿಯಲ್ಲಿ ವಿಮಾನ ಇಂಧನ ದರ ಕಿಲೋಗೆ 31,614.51ರೂ.ಆಗಿತ್ತು. ಹೊಸ ದರದಂತೆ ಕಿಲೋ ಲೀಟರ್ಗೆ 32,199ರೂ.ಕ್ಕೆ ಏರಿಸಲಾಗಿದೆ.
ದೇಶದ ವಾಣಿಜ್ಯ ನಗರಿಯಾದ ಮುಂಬೈಯಲ್ಲಿ ವಿಮಾನ ಇಂಧನ ದರ ಲೀಟರ್ಗೆ 32,138ರೂ.ನಿಂದ 33,138ರೂ.ಗೆ ಏರಿಕೆಗೊಂಡಿದೆ. ಕೋಲ್ಕತಾದಲ್ಲಿ 39,512.96ರೂ.ನಿಂದ 40,122ರೂ.ಗೆ ಏರಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ಗೆ 630ರೂ.ಏರಿಕೆಯೊಂದಿಗೆ 35,724ರೂ.ಆಗಿದೆ. |