ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಠೇವಣಿ ದರವನ್ನು 0.25ರಿಂದ 0.50 ಶೇ.ದಷ್ಟು ಅಲ್ಪ ಪ್ರಮಾಣದ ಕಡಿತ ಮಾಡಿರುವುದಾಗಿ ಶುಕ್ರವಾರ ತಿಳಿಸಿದೆ.ಬ್ಯಾಂಕ್ ಠೇವಣಿ ದರದಲ್ಲಿ ದೇಶಾದ್ಯಂತ ಆಯ್ದ ಗ್ರಾಹಕರಿಗೆ ಮಾತ್ರ ಕಡಿತ ಮಾಡಲಾಗುವುದು ಎಂದು ಬ್ಯಾಂಕ್ನ ವಕ್ತಾರರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ. ಬ್ಯಾಂಕ್ ಕೈಗೊಂಡಿರುವ ಠೇವಣಿ ದರ ಕಡಿತ ನಿರ್ಧಾರ ಮೇ 11ರಿಂದಲೇ ಅನ್ವಯವಾಗಲಿದೆ ಎಂದು ಬ್ಯಾಂಕ್ ಈ ಸಂದರ್ಭದಲ್ಲಿ ತಿಳಿಸಿದೆ. |