ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆಸ್ಟ್ರೇಲಿಯಾ ಬಿಪಿಓ ಖರೀದಿಸಿದ ಏಗಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಸ್ಟ್ರೇಲಿಯಾ ಬಿಪಿಓ ಖರೀದಿಸಿದ ಏಗಿಸ್
ಎಸ್ಸಾರ್ ಗ್ರೂಪ್ ಮಾಲಕತ್ವದ ಬಿಪಿಓ 'ಏಗಿಸ್' ಆಸ್ಟ್ರೇಲಿಯಾ ಮೂಲದ ಯುಸಿಎಂಎಸ್ ಗ್ರೂಪ್ ಕಂಪನಿಯನ್ನು 200 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.

'ಏಗಿಸ್‌'ನ ಆಸ್ಟ್ರೇಲಿಯಾದ ಘಟಕ 'ಏಗಿಸ್ ಬಿಪಿಓ ಸರ್ವಿಸಸ್ ಆಸ್ಟ್ರೇಲಿಯಾ'ವು ಯುಸಿಎಂಎಸ್ ಶೇರುದಾರರಿಗೆ ಪ್ರತಿ ಶೇರಿಗೆ 0.68 ಡಾಲರ್‌ಗಳನ್ನು ಅಂದರೆ ಗುರುವಾರದ ವ್ಯವಹಾರ ಮುಕ್ತಾಯದ ಅವಧಿಯ ಮಾರುಕಟ್ಟೆ ಬೆಲೆಗಿಂತ ಶೇಕಡಾ 133ರಷ್ಟು ಅಧಿಕ ಮೌಲ್ಯವನ್ನು ಪಾವತಿ ಮಾಡಲಿದೆ ಎಂದು ಕಂಪನಿ ಶುಕ್ರವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆಸ್ಟ್ರೇಲಿಯಾದ ಕಂಪನಿಯನ್ನು ಖರೀದಿ ಮಾಡುವುದರೊಂದಿಗೆ ಯುಸಿಎಂಎಸ್‌ನ 2000 ಸಿಬಂದಿಗಳು ಕೂಡ ಏಗಿಸ್ ಸಂಸ್ಥೆಯಡಿಗೆ ಬರಲಿದ್ದು ಭಾರತ ಸೇರಿದಂತೆ, ಫಿಲಿಫೈನ್ಸ್, ಅಮೆರಿಕಾ, ಕೋಸ್ಟರಿಕಾ, ಕೀನ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಒಟ್ಟಾರೆ 35,000 ಸಿಬ್ಬಂದಿಗಳನ್ನು ಹೊಂದಿದಂತಾಗಿದೆ.

500 ಮಿಲಿಯನ್ ಡಾಲರ್‌ ವಾರ್ಷಿಕ ಆದಾಯದ ಲೆಕ್ಕಾಚಾರದಲ್ಲಿರುವ ಏಗಿಸ್ ಈ ವ್ಯವಹಾರವನ್ನು 2009ರ ಆಗಸ್ಟ್ ಹೊತ್ತಿಗೆ ಮುಗಿಸುವ ಯೋಚನೆಯಲ್ಲಿದೆ. ಆಸ್ಟ್ರೇಲಿಯಾವನ್ನು ಹೊರತುಪಡಿಸಿ ಬಿಪಿಓಗಳ ಆದಾಯ ಈಗ 5 ಮಿಲಿಯನ್ ಡಾಲರ್‌ಗಳು. ಯುಸಿಎಂಎಸ್ ಗ್ರೂಪ್ ಕಳೆದ ವಿತ್ತೀಯ ವರ್ಷದಲ್ಲಿ 157 ಮಿಲಿಯನ್ ಡಾಲರ್ ಆದಾಯ ಗಳಿಸಿತ್ತು. ಏಗಿಸ್‌ನ ಆಂತರಿಕ ಲಾಭದಿಂದ ಖರೀದಿ ವ್ಯವಹಾರಕ್ಕೆ ಹಣ ಒದಗಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಇದರೊಂದಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಏಗಿಸ್ 12 ಕಂಪನಿಗಳನ್ನು ಖರೀದಿಸಿದಂತಾಗಿದೆ. ಫಿಲಿಪೈನ್ಸ್‌ನಲ್ಲಿ ಅಧಿಪತ್ಯ ಹೊಂದಿರುವ ಅತಿ ದೊಡ್ಡ ಕಂಪನಿ 'ಪ್ಯೂಪಲ್ ಸಪೋರ್ಟ್'ನ್ನು 250 ಮಿಲಿಯನ್ ಡಾಲರ್‌ಗಳಿಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಏಗಿಸ್ ವಶಪಡಿಸಿಕೊಂಡಿತ್ತು. ಈ ವರ್ಷಾರಂಭದಲ್ಲಿ ಅಮೆರಿಕಾ ಮೂಲದ ಬಿಪಿಓ 'ಐಸಿಟಿ ಗ್ರೂಪ್'ನ್ನು 128 ಮಿಲಿಯನ್ ಡಾಲರ್‌ಗಳಿಗೆ ಖರೀದಿಸುವ ಪ್ರಸ್ತಾಪವನ್ನಿಟ್ಟಿತ್ತಾದರೂ ನಂತರ ಮಾತುಕತೆ ಯಶಸ್ವಿಯಾಗದ ಕಾರಣ ವ್ಯವಹಾರ ನಡೆದಿರಲಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
10 ಕೋಟಿ ಗ್ರಾಹಕರೊಂದಿಗೆ ಏರ್‍ಟೆಲ್
ಐಆರ್‌ಡಿ ಸೂಚನೆ: 'ನ್ಯೂ ಪೆನ್ಯನ್ ಸಿಸ್ಟಂ' ಸ್ಥಗಿತ
ಐಸಿಐಸಿಐ ಬ್ಯಾಂಕ್ ಠೇವಣಿ ದರ ಕಡಿತ
ವಿಮಾನ ಇಂಧನ ದರ ಮತ್ತೆ ಶೇ.1.8ರಷ್ಟು ಏರಿಕೆ
ಎಂಟಿಎನ್‌ಎಲ್‌ನಿಂದ 3ಜಿ ಮೊಬೈಲ್ ಬಿಡುಗಡೆ
ರಿಲಯನ್ಸ್ ಜೀವ ವಿಮಾದ ಸಿಇಓ ನಂದಾಗೋಪಾಲ್ ರಾಜೀನಾಮೆ