ಲೋಕಸಭಾ ಚುನಾವಣೆ ಫಲಿತಾಂಶದ ರಾಜಕೀಯ ಅನಿಶ್ಚಿತತೆಯ ಹಿನ್ನಲೆಯಲ್ಲಿ ಮಹೀಂದ್ರಾ ಗ್ರೂಪ್ನ ಮಹೀಂದ್ರಾ ಹಾಲಿಡೇಸ್ ಆಂಡ್ ರೆಸಾರ್ಟ್ಸ್ ಶೇರು ಬಿಡುಗಡೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ರಾಜಕೀಯ ಅನಿಶ್ಚಿತತೆಯ ಹಿನ್ನಲೆಯಲ್ಲಿ ಶೇರುಪೇಟೆಯಲ್ಲಿ ನಿರಂತರ ಏರುಪೇರು ಕಂಡುಬರುತ್ತಿರುವ ಹಿನ್ನಲೆಯಲ್ಲಿ ಶೇರು ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಕಂಪೆನಿ ಪ್ರಕಟನೆಯಲ್ಲಿ ತಿಳಿಸಿದೆ. |