ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯುಪಿಎ ಭರ್ಜರಿ ಗೆಲುವಿಗೆ ಬ್ಯಾಂಕರುಗಳ ಸ್ವಾಗತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ ಭರ್ಜರಿ ಗೆಲುವಿಗೆ ಬ್ಯಾಂಕರುಗಳ ಸ್ವಾಗತ
ಮನಮೋಹನ್ ಸಿಂಗ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಕೇಂದ್ರದಲ್ಲಿ ಮರಳಿ ಸರಕಾರ ರಚಿಸಲು ಸಾಧ್ಯವಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಬ್ಯಾಂಕರುಗಳು, ಪ್ರಮುಖವಾಗಿ ಸರಕಾರಿ ಸ್ವಾಮ್ಯದ ಬಂಡವಾಳ ಹಿಂತೆಗೆತ ಸೇರಿದಂತೆ ಆರ್ಥಿಕತೆಯನ್ನು ಸದೃಢಗೊಳಿಸಲು ಸಹಕಾರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶದಿಂದ ನಾನು ಸಂತೋಷಗೊಂಡಿದ್ದೇನೆ. ಮತದಾರರು ವ್ಯವಹಾರ ಪ್ರಜ್ಞೆ ಹೊಂದಿದ್ದಾರೆ. ಕಡಿಮೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದರೆ ಸುಭದ್ರ ಆಡಳಿತವನ್ನು ನೀಡಬಹುದಾಗಿದೆ. ಯುಪಿಎ ಸರಕಾರ ಮುಂದುವರಿಯುವದರಿಂದ ಆರ್ಥಿಕ ಸುಧಾರಣೆಯನ್ನು ನಿರೀಕ್ಷಿಸಬಹುದು ಎಂದು ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪಾರೆಖ್ ಪ್ರತಿಕ್ರಿಯಿಸಿದ್ದಾರೆ.

ಸರಕಾರವು ಸಾರ್ವಜನಿಕ ವಲಯದಲ್ಲಿನ ಶೇರು ಹೂಡಿಕೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ತೆರಿಗೆಗಳನ್ನು ಏರಿಸುವ ನಿರ್ಧಾರಕ್ಕೆ ಬರುವ ಬದಲು ಆದಾಯ ಸೃಷ್ಟಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪಾರೆಖ್ ತಿಳಿಸಿದರು.

"ನಾವು ದೊಡ್ಡ ಮಟ್ಟದಲ್ಲಿ ಆದಾಯಕ್ಕಿಂತ ಹೆಚ್ಚಿನ ಖರ್ಚು ಕೊರತೆಯನ್ನನುಭವಿಸುತ್ತಿದ್ದೇವೆ. ಅದರಲ್ಲೂ ಬೃಹತ್ ಖಾತೆಗಳ ಮೊತ್ತದಲ್ಲಿ ಹೆಚ್ಚಿನ ಹೊಡೆತಗಳು ಬೀಳುತ್ತಿವೆ. ಕಳೆದ ವರ್ಷ ನಾವು ಕಚ್ಚಾತೈಲ ಮತ್ತು ರಸಗೊಬ್ಬರಗಳಲ್ಲಿ ಇದೇ ರೀತಿಯ ತೊಂದರೆಗಳನ್ನು ಎದುರಿಸಿದ್ದೆವು" ಎಂದು ಅವರು ವಿವರಿಸಿದರು.

ಸರಕಾರವು ಪ್ರತಿಶತ 51ಕ್ಕಿಂತ ಹೆಚ್ಚು ಶೇರುಗಳನ್ನು ಹೊಂದಿರುವ ಸರಕಾರಿ ಸ್ವಾಮ್ಯದ ಬಂಡವಾಳ ಕಂಪನಿಗಳಿಂದ ಹೂಡಿಕೆ ಹಿಂತೆಗೆತ ಮಾಡುವ ಅಗತ್ಯವಿದೆ ಎಂದೂ ಅವರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಜಿ ಗೃಹ ಸಚಿವರಿಗೆ ಅನಿರೀಕ್ಷಿತ ಸೋಲು
15ನೇ ಲೋಕಸಭೆ ಪೂರ್ಣವಾಧಿ ಬಜೆಟ್ ಅಧಿವೇಶನ
2010ರ ನಂತರ ಆರ್ಥಿಕ ಚೇತರಿಕೆ: ಎಸ್‌ಪಿ
ಶೇರು ಬಿಡುಗಡೆ ಪ್ರಕಿಯೆ ಮುಂದೂಡಿಕೆ
ಚುನಾವಣೆ ಫಲಿತಾಂಶದ ಬಳಿಕ ಗೋಧಿ ರಫ್ತು
ಸತ್ಯಂ: 14 ಸಾವಿರ ಉದ್ಯೋಗ ಕಡಿತ?