ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 20ರೂ.ಹಾಗೂ 1ಸಾವಿರ ರೂ.ಗಳ ನೂತನ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.20 ರೂ.ಗಳಲ್ಲಿ ಸ್ವಲ್ಪ ಬದಲಾವಣೆ ಹಾಗೂ 1ಸಾವಿರ ರೂ.ಗಳಲ್ಲಿ ಈ ಮೊದಲಿನಂತೆ ಮಹಾತ್ಮಗಾಂಧಿ ಚಿತ್ರವನ್ನು ಹೊಂದಿದ್ದು, ಯಾವುದೇ ಹೆಚ್ಚಿನ ಬದಲಾವಣೆ ಮಾಡದೆ ನೂತನ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಆರ್ಬಿಐ ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದೆ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 20ರೂ.ಹಾಗೂ ಸಾವಿರ ರೂ.ಗಳಿಗೂ ಲೀಗಲ್ ಟೆಂಡರ್ ಅನ್ವಯ ನೋಟುಗಳ ಮುದ್ರಣ ಕಾರ್ಯ ಮುಗಿಸಿದ್ದು, ಶೀಘ್ರವಾಗಿ ಬಿಡುಗಡೆ ಮಾಡುವುದು ಎಂದು ಹೇಳಿದೆ. |