ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಹೊಡೆತದ ನಡುವೆಯೂ 'ಟಾಟಾ' ವೇತನ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಹೊಡೆತದ ನಡುವೆಯೂ 'ಟಾಟಾ' ವೇತನ ಹೆಚ್ಚಳ
ಜಾಗತಿಕ ಆರ್ಥಿಕ ಹಿಂಜರಿತದ ನಂತರ ಇದೀಗ ಪ್ರಸಕ್ತ ಸಾಲಿನಲ್ಲಿ ಕಂಪೆನಿಯ ನೌಕರರಿಗೆ ಸಂಬಳವನ್ನು ಹೆಚ್ಚಿಸಿರುವುದಾಗಿ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಕಂಪೆನಿ ಸೋಮವಾರ ಘೋಷಿಸಿದೆ.

ಆರ್ಥಿಕ ಹೊಡೆತದಿಂದಾಗಿ ಯಾವುದೇ ಕಂಪೆನಿಗಳು ಈ ಸಾಲಿನಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡಿಲ್ಲ, ಆದರೆ ನಾವು ಈ ಬಾರಿ ಖಂಡಿತವಾಗಿಯೂ ವೇತನವನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ಇರುವುದಾಗಿ ಟಾಟಾ ಮೋಟಾರ್ಸ್‌ನ ಮಾನವ ಸಂಪನ್ಮೂಲದ ಉಪಾಧ್ಯಕ್ಷ ತಾಂಬೇ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಂಪೆನಿ ಅಂತಿಮ ನಿರ್ಧಾರ ಕೈಗೊಂಡಿದ್ದು, ಜುಲೈ 1ಕ್ಕೆ ಅಧಿಕೃತವಾಗಿ ಘೋಷಿಸಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ಶೇ.12-13ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ ಈ ಬಾರಿ ಮಾತ್ರ ಸಿಂಗಲ್ ಡಿಜಿಟ್ ಏರಿಕೆ ಆಗಲಿದೆ ಎಂದು ವಿವರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರದಲ್ಲೇ 20ರೂ.,1ಸಾವಿರ ರೂ.ನೂತನ ನೋಟು
ಮುಂಬೈಯಲ್ಲಿ ಸಿಎಪಿಎನಿಂದ 600ಕೋಟಿ ವೆಚ್ಚದ 'ಏರೋಪಾರ್ಕ್'
ಡಚ್ ಟಯರ್ ಕಂಪೆನಿ ಅಪೋಲೊ ತೆಕ್ಕೆಗೆ
ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ರಾಜೀನಾಮೆ
ಆರ್ಥಿಕ ಹಿಂಜರಿತ-ಬಡ್ಡಿದರ ಮತ್ತಷ್ಟು ಕುಸಿತ ಸಾಧ್ಯತೆ
ಬಜೆಟ್‌ನಲ್ಲಿ ನೌಕರಿ, ಹೂಡಿಕೆಗೆ ಆದ್ಯತೆ ನೀಡ್ಬೇಕು: ದೇಸಾಯ್