ಪ್ರತಿಯೊಬ್ಬ ಇನ್ಫೋಸಿಸ್ ನೌಕರ 97ಲಕ್ಷ ಮೌಲ್ಯಯುತರಾಗಿದ್ದು, ಕಂಪೆನಿಗೆ ಅವರು ಗಳಿಸಿಕೊಡುವ ಭವಿಷ್ಯದ ಸಂಪಾದನೆ ಮೇಲೆ ಈ ಮೌಲ್ಯ ಆಧರಿಸಿ ಲೆಕ್ಕಾಚಾರ ಹಾಕಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಸಾಫ್ಟ್ವೇರ್ ನೌಕರರು ಹಾಗೂ ಸಪೋರ್ಟ್ ಸ್ಟಾಪ್ ಅವರ ಆದಾಯ 2009ರ ಮಾರ್ಚ್ ಅಂತ್ಯಕ್ಕೆ ಮಾನವ ಸಂಪನ್ಮೂಲ ಒಟ್ಟು ಮೌಲ್ಯ 1,02,133ಕೋಟಿ ರೂ.ಆಗಿದೆ. ಅಲ್ಲದೇ ಇನ್ಫೋಸಿಸ್ ಕಂಪೆನಿಯ ವಾರ್ಷಿಕ ವರದಿಯಂತೆ, 2009ರಲ್ಲಿ ಮಾನವ ಸಂಪನ್ಮೂಲ ಮೌಲ್ಯ 1,02,133ಕೋಟಿ ರೂ.ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಇನ್ಫೋಸಿಸ್ ನೌಕರ 97ಲಕ್ಷ ಮೌಲ್ಯಯುತರಾಗಿದ್ದಾರೆ ಎಂದು ಹೇಳಿದೆ.
2008ರ ಮಾರ್ಚ್ 31ರ ಅಂತ್ಯದ ಮಾನವ ಸಂಪನ್ಮೂಲದ ಮೌಲ್ಯ 98,821ಕೋಟಿ ರೂ. ಆ ಸಂದರ್ಭದಲ್ಲಿ ಕಂಪೆನಿಯ ನೌಕರರ ಸಂಖ್ಯೆ 91,187 ಆಗಿತ್ತು. ಅದೇ ರೀತಿ 2009ರ ಮಾರ್ಚ್ ಅಂತ್ಯದಲ್ಲಿ ಸಾಫ್ಟ್ವೇರ್ ನೌಕರರ ಸಂಖ್ಯೆ 97,349 ಹಾಗೂ ಸಪೋರ್ಟ್ ಸ್ಟಾಫ್ ಸಂಖ್ಯೆ 7,501ಆಗಿದೆ ಎಂದು ತಿಳಿಸಿದೆ.
ಪ್ರತಿ ನೌಕರರು ಕಂಪೆನಿಗೆ ಅವರು ಗಳಿಸಿಕೊಡುವ ಭವಿಷ್ಯದ ಸಂಪಾದನೆ ಮೇಲೆ ಈ ಲೆಕ್ಕಾಚಾರ ಹಾಕಲಾಗಿದೆ ಎಂದು ಇನ್ಫೋಸಿಸ್ ವಿವರಿಸಿದೆ.
|