ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎನ್‌‌ಟಿಪಿಸಿ-ಆರ್‌ಐಎಲ್ ಒಪ್ಪಂದಕ್ಕೆ 1ವಾರ ಗಡುವು: ಸಚಿವಾಲಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್‌‌ಟಿಪಿಸಿ-ಆರ್‌ಐಎಲ್ ಒಪ್ಪಂದಕ್ಕೆ 1ವಾರ ಗಡುವು: ಸಚಿವಾಲಯ
ನೈಸರ್ಗಿಕ ಅನಿಲ ಖರೀದಿಗೆ ಸಂಬಂಧಿಸಿದಂತೆ ರಿಲಯನ್ಸ್ ಇಂಡಸ್ಟ್ರೀಸ್ ಜತೆ ಈ ವಾರದೊಳಗೆ ಒಪ್ಪಂದ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಎನ್‌ಟಿಪಿಸಿ ಲಿಮಿಟೆಡ್‌ಗೆ ಅಂತಿಮ ಗಡುವು ನೀಡಿದೆ. ಅಲ್ಲದೇ ಈ ಅವಕಾಶವನ್ನು ಕಳೆದುಕೊಂಡಿದ್ದೇ ಆದಲ್ಲಿ, ಆ ಅವಕಾಶವನ್ನು ಬೇರೊಂದು ಕಂಪೆನಿಗೆ ನೀಡಲಾಗುವುದು ಎಂದು ಸರ್ಕಾರ ಕೊನೆಯ ಎಚ್ಚರಿಕೆ ನೀಡಿದೆ.

ಒಪ್ಪಂದದ ಕುರಿತಂತೆ ತೈಲ ಸಚಿವಾಲಯದ ವಕ್ತಾರರು ಎನ್‌ಟಿಪಿಸಿ ಅಧ್ಯಕ್ಷ ಆರ್.ಎಸ್.ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿನಿತ್ಯ ಬೇಕಾಗಿರುವ 2.67ಮಿಲಿಯನ್ ಕ್ಯೂಬಿಕ್ ಮೀಟರ್ ನೈಸರ್ಗಿಕ ಅನಿಲವನ್ನು ರಿಲಯನ್ಸ್ ಇಂಡಸ್ಟ್ರೀಸ್ ಜತೆ ಖರೀದಿಗಾಗಿ ಈ ವಾರದೊಳಗೆ ಒಪ್ಪಂದ ಮಾಡಿಕೊಳ್ಳುವಂತೆ ಸೂಚಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅದಕ್ಕಾಗಿ ತುಂಬಾ ಕಂಪೆನಿಗಳು ಕಾಯುತ್ತಿವೆ. ಎನ್‌ಟಿಪಿಸಿ ಅವಕಾಶಕ್ಕಾಗಿ ಕಾಯುತ್ತಿರಲು ಸಾಧ್ಯವಿಲ್ಲ ಅದು ಕೂಡಲೇ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಅದಕ್ಕಾಗಿ ಎನ್‌ಟಿಪಿಸಿ ರಿಲಯನ್ಸ್ ಇಂಡಸ್ಟ್ರೀಸ್ ಜತೆ ಒಪ್ಪಂದ ಮಾಡಿಕೊಳ್ಳದಿದ್ದರೆ ಅವರ ಅವಕಾಶಕ್ಕಾಗಿ ಕಾಯಲು ಸಾಧ್ಯವಿಲ್ಲ ಎಂದು ತೈಲ ಸಚಿವಾಲಯ ಸೂಚಿಸಿದೆ.

ಕಾನೂನು ಸಮ್ಮತ ಅಭಿಪ್ರಾಯವನ್ನು ಪಡೆಯುತ್ತಿರುವುದರಿಂದ ಅನಿಲ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ಒಪ್ಪಂದ ತಡವಾಗಲು ಮುಖ್ಯ ಕಾರಣ ಎಂದು ಎನ್‌ಟಿಪಿಸಿ ಸ್ಪಷ್ಟನೆ ನೀಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2010ರಲ್ಲಿ ಸರಕು ಬೇಡಿಕೆ ಹೆಚ್ಚಳ ಸಾಧ್ಯತೆ: ಸಿಎಂಐಇ
'ಮಹಾವಂಚನೆ' ತನಿಖೆಗೆ ಅಮೆರಿಕ ಕಾಂಗ್ರೆಸ್ ಅನುಮತಿ
ಎಸ್ಸಾರ್ ತೈಲ ಕಂಪೆನಿಗೆ 455ಕೋಟಿ ರೂ.ನಷ್ಟ
ಎಸ್‌ಬಿಎಂ ಬಡ್ಡಿ ದರ ಕಡಿತ
ಕಾರ್ಮಿಕರ ಧರಣಿ: ಎಂಆರ್‌‍ಎಫ್ ಘಟಕ ಸ್ಥಗಿತ
ಪ್ರತಿ ಇನ್ಫೋಸಿಸ್ ನೌಕರ‌‌ನಿಂದ ಕಂಪೆನಿಗೆ 97 ಲಕ್ಷ ಆದಾಯ!