ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಫ್ತು ಮಾರಾಟ ಹೆಚ್ಚಳ ಮುಖ್ಯ ಗುರಿ: ಮಾರುತಿ ಸುಜುಕಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಫ್ತು ಮಾರಾಟ ಹೆಚ್ಚಳ ಮುಖ್ಯ ಗುರಿ: ಮಾರುತಿ ಸುಜುಕಿ
ಭಾರತದ ಪ್ರತಿಷ್ಠಿತ ಹಾಗೂ ಬೃಹತ್ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿಯ ವಾರ್ಷಿಕ ವಹಿವಾಟು 20,500ಕೋಟಿ ರೂಪಾಯಿ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಎರಡುಪಟ್ಟು ರಫ್ತು ಮಾಡುವ ಗುರಿ ಹೊಂದಿರುವುದಾಗಿ ಮಂಗಳವಾರ ತಿಳಿಸಿದೆ.

2009ನೇ ಸಾಲಿನಲ್ಲಿ 130,000 ರಫ್ತು ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದು, ಅದರಲ್ಲಿ ಎ ಸ್ಟಾರ್, ಮಾರುತಿ 800, ಎಸ್ಟಿಲೋ ಹಾಗೂ ಸ್ವಿಫ್ಟ್ ಮಾದರಿಯ ಕಾರುಗಳು ಸೇರಿವೆ ಎಂದು ಮಾರುತಿ ಸುಜುಕಿ ಮಾರಾಟ ವಿಭಾಗದ ಕಾರ್ಯನಿರ್ವಹಣಾಧಿಕಾರಿ ಮಾಯಾಂಕ್ ಪರೀಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಈಗಾಗಲೇ ಎ-ಸ್ಟಾರ್ ಮಾದರಿಯ 70ಸಾವಿರ ಕಾರುಗಳನ್ನು ಜರ್ಮನಿ, ಇಟಲಿ, ಫ್ರಾನ್ಸ್, ಹಾಲೆಂಡ್‌ಗಳಿಗೆ ರಫ್ತು ಮಾಡಲಾಗಿದೆ. ಇನ್ನುಳಿದ ಯುರೋಪಿಯನ್ ದೇಶಗಳಿಗೆ ಸುಜುಕಿ ಅಲ್ಟೋ ಕಾರುಗಳನ್ನು ರಫ್ತು ಮಾಡಲಾಗಿದೆ. ಅಲ್ಲದೇ ಯುರೋಪ್‌ನಲ್ಲಿ ಮಾರಾಟಕ್ಕಾಗಿ ಸುಮಾರು 30ಸಾವಿರ ಅಲ್ಟೋವನ್ನು ನಿಸ್ಸಾನ್ ಮೋಟಾರ್ ಕಂಪೆನಿಗೆ ನೀಡಿರುವುದಾಗಿ ಹೇಳಿದೆ.

ಕಳೆದ ವರ್ಷದಲ್ಲಿ 50ಸಾವಿರ ಮಾರುತಿ ಸುಜುಕಿಯನ್ನು ರಫ್ತು ಮಾಡಲಾಗಿತ್ತು. ಆ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ರಫ್ತು ಮಾರಾಟದಲ್ಲಿ ಹೆಚ್ಚಳದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು: ರೈತರಿಗೆ ಶೇ.3ರ ಬಡ್ಡಿದರದಲ್ಲಿ ಸಾಲ
ಮಂಗಳೂರು-ಮಣಿಪಾಲ್‌‌ಗೆ ಶೀಘ್ರವೇ ವೋಲ್ವೊ ಬಸ್
'ಮಹಾಲಿಂಗಂ' ಟಾಟಾ ಜೀವವಿಮಾ ಕಂಪೆನಿ ಆಡಳಿತ ನಿರ್ದೇಶಕ
ಎನ್‌‌ಟಿಪಿಸಿ-ಆರ್‌ಐಎಲ್ ಒಪ್ಪಂದಕ್ಕೆ 1ವಾರ ಗಡುವು: ಸಚಿವಾಲಯ
2010ರಲ್ಲಿ ಸರಕು ಬೇಡಿಕೆ ಹೆಚ್ಚಳ ಸಾಧ್ಯತೆ: ಸಿಎಂಐಇ
'ಮಹಾವಂಚನೆ' ತನಿಖೆಗೆ ಅಮೆರಿಕ ಕಾಂಗ್ರೆಸ್ ಅನುಮತಿ