ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಸತ್ಯಂ' ಪರಿಹಾರ ಪ್ರಕರಣ-ಸುಪ್ರೀಂಗೆ ಮೊರೆ: ಮೈತಾಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಸತ್ಯಂ' ಪರಿಹಾರ ಪ್ರಕರಣ-ಸುಪ್ರೀಂಗೆ ಮೊರೆ: ಮೈತಾಸ್
ಮಹಾ ವಂಚನೆ ಎಸಗಿದ ಸತ್ಯಂ ಕಂಪೆನಿಯಿಂದ 4,975ಕೋಟಿ ರೂಪಾಯಿ ಪರಿಹಾರ ಹಣ ದೊರಕಿಸಿಕೊಡುವಂತೆ ಮೈತಾಸ್ ಟಚ್ ಇನ್ವೆಸ್ಟರ್ಸ್ ಅಸೋಸಿಯೇಶನ್(ಎಂಟಿಐಎ)ಸಲ್ಲಿಸಿದ್ದ ಮನವಿನಯನ್ನು ರಾಷ್ಟ್ರೀಯ ಗ್ರಾಹಕ ಆಯೋಗ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ, ಈ ನಿರ್ಧಾರವನ್ನು ಸರ್ವೋಚ್ಛನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಎಂಟಿಐಎ ತಿಳಿಸಿದೆ.

ಪರಿಹಾರ ಹಣ ದೊರಕಿಸಿರುವ ನಿಟ್ಟಿನಲ್ಲಿ ಸಲ್ಲಿಸಿದ್ದ ಮನವಿಯ ತಿರಸ್ಕರಿಸಿರುವ ಆಯೋಗದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ತಾವು ನಿರ್ಧರಿಸಿರುವುದಾಗಿ ಎಂಟಿಐಎನ ನಿರ್ದೇಶಕ ವೀರೇಂದ್ರ ಜೈನ್ ಹೇಳಿದರು.

ಸತ್ಯಂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಧನ ಒದಗಿಸುವ ಕೊಡುವ ಸಾಮರ್ಥ್ಯ ಆಯೋಗಕ್ಕೆ ಇಲ್ಲ ಎಂದು ಈ ಮೊದಲು ಅಭಿಪ್ರಾಯ ವ್ಯಕ್ತಪಡಿಸಿ, ಈ ಪ್ರಕರಣ ಇದೀಗ ಸಿಬಿಐ ಸುಪರ್ದಿಯಲ್ಲಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಂ ಸಂಸ್ಥಾಪಕ ಬಿ.ರಾಮಲಿಂಗಾ ರೆಡ್ಡಿ, ಸಹೋದರ ಬಿ.ರಾಮರಾಜು ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.

ಮೈತಾಸ್ ಪರಿಹಾರಕ್ಕಾಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಅದು ಗ್ರಾಹಕ ರಕ್ಷಣಾ ಕಾಯ್ದೆ,1986ರಕ್ಕೂ ಅನ್ವಯ ಆಗುತ್ತಿಲ್ಲ. ಆ ಕಾರಣದಿಂದಾಗಿ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಆಯೋಗದ ಜಸ್ಟೀಸ್ ಕೆ.ಎಸ್.ಗುಪ್ತಾ ಹಾಗೂ ರಾಜ್ಯಲಕ್ಷ್ಮಿರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೆಲ್‌ಸ್ಟಾರ್ ಐಟಿ ಯಶ್ ಬಿರ್ಲಾ ಕಂಪೆನಿಗೆ ತೆಕ್ಕೆಗೆ
3ರೂ.ಗೆ ಅಕ್ಕಿ-ಬೇಡಿಕೆ ಈಡೇರಿಕೆಗೆ 1ಲಕ್ಷ ಕೋಟಿ ರೂ.ಬೇಕು!
ಮಾರುತಿ-800 ಅತ್ಯಾಧುನೀಕರಣ: ಮಾರುತಿ ಸುಜುಕಿ
ಎಸ್‌ಬಿಐ ಸಹವರ್ತಿ ಬ್ಯಾಂಕ್‌ಗಳೊಡನೆ ವಿಲೀನ ಸಾಧ್ಯತೆ?
ಉದ್ಯೋಗ ಸೃಷ್ಟಿಗೆ ಉತ್ತೇಜನ: ಪ್ರಧಾನಿ
ರಫ್ತು ಮಾರಾಟ ಹೆಚ್ಚಳ ಮುಖ್ಯ ಗುರಿ: ಮಾರುತಿ ಸುಜುಕಿ