ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗ್ರಾಮೀಣ ಪ್ರದೇಶಗಳತ್ತ ಮಾರುತಿ ಸುಜುಕಿ ಚಿತ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗ್ರಾಮೀಣ ಪ್ರದೇಶಗಳತ್ತ ಮಾರುತಿ ಸುಜುಕಿ ಚಿತ್ತ
ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಕಾರು ಮಾರಾಟದಲ್ಲಿ 2009-10ನೇ ಸಾಲಿನಲ್ಲಿ ಶೇ.12ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಿರುವುದಾಗಿ ಮಾರುತಿ ಸುಜುಕಿ ಭಾರತದ ಪ್ರಧಾನ ಮ್ಯಾನೇಜರ್ ಆರ್.ಎಸ್.ಕಾಲ್ಸಿ ತಿಳಿಸಿದ್ದಾರೆ.

ಭಾರತದ ಗ್ರಾಮೀಣ ಪ್ರದೇಶದಲ್ಲಿಯೇ ಶೇ.12ರಷ್ಟು ಕಾರು ಮಾರಾಟದಲ್ಲಿ ಪ್ರಗತಿ ಸಾಧಿಸುವ ಮುಖ್ಯ ಗುರಿ ಹೊಂದಿರುವುದಾಗಿ ಹೇಳಿರುವ ಮಾರುತಿ ಸುಜುಕಿ ಸಂಸ್ಥೆ, ನಗರಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶದಲ್ಲೂ ಕಾರು ಮಾರುಕಟ್ಟೆಯನ್ನು ಪಡೆಯಲಿದೆ ಎಂದು ಹೇಳಿದೆ.

ಈ ಮೊದಲು ಒಟ್ಟು ಕಾರು ಮಾರಾಟದಲ್ಲಿ ಶೇ.4.5ರಷ್ಟು ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಮಾರಾಟವಾಗುತ್ತಿತ್ತು. ಆದರೆ ಇದೀಗ ಶೇ.9ರಷ್ಟು ಮಾರಾಟವಾಗುತ್ತಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯುವುದೇ ಕಂಪೆನಿಯ ಉದ್ದೇಶವಾಗಿದೆ ಎಂದು ಮಾರುತಿ ಸುಜುಕಿಯ ಕಾಲ್ಸಿ ವಿವರಿಸಿದ್ದಾರೆ.

ಕಳೆದ ವರ್ಷ ಕಂಪೆನಿಯಿಂದ ಗ್ರಾಮೀಣ ಪ್ರದೇಶಕ್ಕೆ 2,500ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಅಲ್ಲದೇ ಕೆಲವು ಗ್ರಾಮೀಣ ಪ್ರದೇಶಗ ಜನರಿಗೆ ಅಲ್ಟೋ ಮತ್ತು ವ್ಯಾಗೋನ್ ಆರ್ ಇಷ್ಟದ ಕಾರುಗಳಾಗಿವೆ. 2008ರ ಸಾಲಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 7.22ಲಕ್ಷ ಕಾರುಗಳನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಂಟಿಎನ್‌ಎಲ್ ಬಂದ್ ವಾಪಸ್-ಸೇವೆ ಪುನರಾರಂಭ
ಶೀಘ್ರವೇ 10ರೂ. ಹೊಸನಾಣ್ಯ ಬಿಡುಗಡೆ: ಆರ್‌ಬಿಐ
'ಸತ್ಯಂ' ಪರಿಹಾರ ಪ್ರಕರಣ-ಸುಪ್ರೀಂಗೆ ಮೊರೆ: ಮೈತಾಸ್
ಮೆಲ್‌ಸ್ಟಾರ್ ಐಟಿ ಯಶ್ ಬಿರ್ಲಾ ಕಂಪೆನಿಗೆ ತೆಕ್ಕೆಗೆ
3ರೂ.ಗೆ ಅಕ್ಕಿ-ಬೇಡಿಕೆ ಈಡೇರಿಕೆಗೆ 1ಲಕ್ಷ ಕೋಟಿ ರೂ.ಬೇಕು!
ಮಾರುತಿ-800 ಅತ್ಯಾಧುನೀಕರಣ: ಮಾರುತಿ ಸುಜುಕಿ