ದೇಶದ ಎರಡನೇ ಪ್ರಮುಖ ಪಬ್ಲಿಕ್ ಸೆಕ್ಟರ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಸಕ್ತ ಸಾಲಿನ ಚತುರ್ಥ ಮಾಸಿಕ ಲೆಕ್ಕಚಾರದಲ್ಲಿ ಒಟ್ಟು 865ಕೋಟಿ ರೂಪಾಯಿ ಲಾಭ ಗಳಿಸಿರುವುದಾಗಿ ತಿಳಿಸಿದೆ.
2008ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಒಟ್ಟು 544ಕೋಟಿ ರೂಪಾಯಿ ಲಾಭ ಗಳಿಸಿತ್ತು. ಈ ಬಾರಿ ಲಾಭದ ಅಂಕಿ-ಅಂಶ ಮತ್ತಷ್ಟು ಏರಿಕೆ ಕಂಡಿರುವುದಾಗಿ ಹೇಳಿದೆ.
ಅದೇ ರೀತಿ ಡಿವಿಡೆಂಡ್ ಅನ್ನು ಶೇ.200ಕ್ಕೆ ಏರಿಸಿರುವುದಾಗಿ ಬ್ಯಾಂಕ್ ಆಡಳಿತ ಮಂಡಳಿ ಘೋಷಿಸಿದೆ. ಅಲ್ಲದೇ 2009ರ ಮಾರ್ಚ್ 31ರವರೆಗೆ ಬ್ಯಾಂಕ್ನ ಪ್ರತಿ ಷೇರಿನ ಮುಖಬೆಲೆ 10ರೂ. ಆಗಿತ್ತು ಎಂದು ತಿಳಿಸಿದೆ.
2009ನೇ ಸಾಲಿನಲ್ಲಿ ಬ್ಯಾಂಕ್ 865ಕೋಟಿ ರೂಪಾಯಿ ಲಾಭ ಗಳಿಸುವ ಮೂಲಕ ಶೇ.59.2ರಷ್ಟು ಏರಿಕೆ ಕಂಡಿದ್ದು, ಇದು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿಯೇ ಅತಿ ಹೆಚ್ಚಿನ ಲಾಭ ಇದಾಗಿದೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ನ ಆಡಳಿತ ನಿರ್ದೇಶಕ ಕೆ.ಸಿ.ಚಕ್ರವರ್ತಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. |