ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಪ್ಲೇಮ್' ಪೇಟೆಂಟ್ ಪ್ರಕರಣ: ಬಜಾಜ್ ವಿರುದ್ಧ ಟಿವಿಎಸ್‌‌ಗೆ ಜಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಪ್ಲೇಮ್' ಪೇಟೆಂಟ್ ಪ್ರಕರಣ: ಬಜಾಜ್ ವಿರುದ್ಧ ಟಿವಿಎಸ್‌‌ಗೆ ಜಯ
ಉತ್ಪಾದನೆ ಮತ್ತು ಪ್ಲೇಮ್ 125ಸಿಸಿ ಮಾರುಕಟ್ಟೆ ಸ್ವಾಮ್ಯ ಪ್ರಕರಣದ ಕುರಿತಂತೆ ಮುಂದುವರಿಯುವಂತೆ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ಟಿವಿಎಸ್ ಮೋಟಾರ್ ಕಂಪೆನಿಗೆ ಆದೇಶ ನೀಡಿದೆ.

ಟಿವಿಎಸ್ ಕಂಪೆನಿಯ ಪ್ಲೇಮ್ 125ಸಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಜಾಜ್ ಆಟೋ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಜಾಜ್ ಪ್ರಕಾರ, ಜೋಡಿ ಸ್ಪಾರ್ಕ್ ಪ್ಲಗ್ ತಂತ್ರಜ್ಞಾನದ ಪೇಟೆಂಟ್ ಅನ್ನು ತಾವು ಮೊದಲೇ ನೋಂದಣಿ ಮಾಡಿಕೊಂಡಿದ್ದೇವೆ. ಆದರೆ ಟಿವಿಎಸ್ ಮೋಟಾರ್ ಕಂಪೆನಿ ಪ್ಲೇಮ್ ಹೆಸರಲ್ಲಿ ಅದೇ ತಂತ್ರಜ್ಞಾನ ಉಪಯೋಗಿಸಿರುವುದರ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು.

ಟಿವಿಎಸ್ ಮೋಟಾರ್ ವಿರುದ್ಧ ಬಜಾಜ್ ಆಟೋ ಆರೋಪದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳು, ಟಿವಿಎಸ್ ಟ್ವಿನ್ ಸ್ಪಾರ್ಕ್ ಪ್ಲಗ್ ತಂತ್ರಜ್ಞಾನದ 'ಪ್ಲೇಮ್ ಮೋಟಾರ್' ಸೈಕಲ್‌‌ ಮಾರಾಟ ಮತ್ತು ಉತ್ಪಾದನೆ ಮುಂದುವರಿಸುವಂತೆ ಆದೇಶ ನೀಡಿದರು.

ಟಿವಿಎಸ್ ಹಾಗೂ ಬಜಾಜ್ ಆಟೋ ರೂಪುಗೊಳಿಸಿದ ವಿನ್ಯಾಸದ ನಡುವೆ ಸಾಕಷ್ಟು ವ್ಯತ್ಯಾಸ ಇರುವುದನ್ನು ಗಮನಿಸಲಾಗಿದೆ ಎಂದು ತಿಳಿಸಿರುವ ಕೋರ್ಟ್, ಟಿವಿಎಸ್ ಅಳವಡಿಸಿಕೊಂಡಿರುವ ಜೋಡಿ ಪ್ಲಗ್ ತಂತ್ರಜ್ಞಾನ ಕಂಪೆನಿಯ ವಿಶಿಷ್ಟ ತಂತ್ರಜ್ಞಾನವಲ್ಲ, ಇದು ಆಸ್ಟ್ರೀಯದ ಎವಿಎಲ್ ಜಿಎಂಬಿಎಚ್ ಹಾಗೂ ಟಿವಿಎಸ್ ಪರವಾನಿಗೆ ಹೊಂದಿರುವ ವಿನ್ಯಾಸವಾಗಿದೆ ಎಂದು ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೋಟೆಲ್ ಉದ್ಯಮ ಚೇತರಿಕೆ ನಿರೀಕ್ಷೆ: ಎಫ್‌ಎಚ್‌ಆರ್‌ಎಐ
ಹಣದುಬ್ಬರ ಶೇ 0.1 ನಿರೀಕ್ಷೆ
ಪಂಜಾಬ್ ನ್ಯಾಶನಲ್ ಬ್ಯಾಂಕ್: 865ಕೋಟಿ ರೂ. ಲಾಭ
ಗ್ರಾಮೀಣ ಪ್ರದೇಶಗಳತ್ತ ಮಾರುತಿ ಸುಜುಕಿ ಚಿತ್ತ
ಎಂಟಿಎನ್‌ಎಲ್ ಬಂದ್ ವಾಪಸ್-ಸೇವೆ ಪುನರಾರಂಭ
ಶೀಘ್ರವೇ 10ರೂ. ಹೊಸನಾಣ್ಯ ಬಿಡುಗಡೆ: ಆರ್‌ಬಿಐ